ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿ ಕಿಟ್ಟಿ ಅಲಿಯಾಸ್ ರಾಬರಿ ಕಿಟ್ಟಿಯ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಿನೇಶ್, ನರಸಿಂಹ,ರಘು,ನವೀನ್, ಸ್ವಾಮಿ ಬಂಧಿತ ಆರೋಪಿಗಳು. ಇವರು ಕೇಂಗೆರಿ ಠಾಣಾ ವ್ಯಾಪ್ತಿಯ ಹರ್ಷ ಲೇಔಟ್ನ ರೈಲ್ವೆ ಅಂಡರ್ ಪಾಸ್ ನಲ್ಲಿ ನಿಂತು ಕರಗ ವೀಕ್ಷಿಸಿ ಬರುವವರನ್ನು ದೋಚಲು ಅಣಿಯಾಗಿದ್ರು.
ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಒಂದು ಕಾರು, ದೊಣ್ಣೆ,ಚಾಕು ಸೇರಿ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಐವರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
Kshetra Samachara
25/04/2022 03:34 pm