ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ರು ಭರ್ಜರಿ ಕಾರ್ಯಾಚರಣೆ ನಡೆಸಿ 12 ಲಕ್ಷ ಮೌಲ್ಯದ 40 ಕೆಜಿ ಗಾಂಜ ಸೀಜ್ ಮಾಡಿದ್ದಾರೆ.
ಅಂತರರಾಜ್ಯ ಗಾಂಜ ಪೆಡ್ಲರ್ ಆದೀಲ್ ಹಮೀದ್ ಶೇಕ್ ಬಂಧಿತ ಆರೋಪಿಯಾಗಿದ್ದು, ಈತ ಮೂಲತಃ ಮಹಾರಾಷ್ಟ್ರದ ಲಕ್ಷ್ಮೀಪುರ ನಿವಾಸಿಯಾಗಿದ್ದಾನೆ. ಹೊರರಾಜ್ಯಗಳಿಂದ ಗಾಂಜ ತರಿಸಿ ಸ್ಥಳೀಯವಾಗಿ ಗಾಂಜ ಡೀಲ್ ಮಾಡ್ತಿದ್ದ. ಕುಮಾರಸ್ವಾಮಿ ಲೇಔಟ್ ನ ಕೆಂಪೇಗೌಡ ಮೈದಾನದಲ್ಲಿ ಗಾಂಜ ಮಾರಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಹಿಂದೆ ಕೆಲವು ಲೋಕಲ್ ಗಾಂಜ ವ್ಯಾಪಾರಿಗಳಿಗೆ ಗಾಂಜ ಮಾರಾಟ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ. ಕಾಲೇಜು ಮತ್ತು ಯುವಕರಿಗರನ್ನ ಟಾರ್ಗೆಟ್ ಮಾಡಿಕೊಂಡು ಈ ಗಾಂಜ ಮಾರಾಟ ಮಾಡ್ತಿದ್ದಾಗೆ ತಿಳಿದು ಬಂದಿದೆ.
Kshetra Samachara
14/04/2022 05:23 pm