ಬೆಂಗಳೂರಿನ ವಿನ್ಸೆಂಟ್ ಪಲ್ಲೋಟಿ ಹಾಗೂ ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಇಂದು ಬೆಳಗ್ಗೆ ಇ ಮೇಲ್ ಮೂಲಕವೇ ಬಾಂಬ್ ಹಾಕುವ ಬೆದರಿಕೆಯೊಡ್ಡಿದ್ದಾರೆ.
ಹುಸ್ಕೂರು ಬಳಿ ಇರೋ ಈ ಶಾಲೆಯಲ್ಲಿ ಈಗ ಭಯದ ವಾತಾವರಣ ನಿರ್ಮಾಣ ಆಗಿದೆ. ಶಾಲೆ ಸಿಬ್ಬಂದಿ ಕೂಡ ಶಾಲೆಯಿಂದ ಭಯದಲ್ಲಿಯೇ ಹೊರಗೆ ಓಡಿ ಬಂದಿದ್ದಾರೆ. ಹೆಬ್ಬುಗೋಡಿ ಪೊಲೀಸರು ಶಾಲೆಗೆ ಈಗಾಗಲೇ ದೌಡಾಯಿಸಿದ್ದಾರೆ.
ವಿನ್ಸೆಂಟ್ ಪಲ್ಲೋಟಿ ಶಾಲೆಗೆ ಹೆಣ್ಣೂರು ಪೊಲೀಸರು ಭೇಟಿಕೊಟ್ಟಿದ್ದಾರೆ. ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್‌ಗಳು ಶಾಲೆಯತ್ತ ಧಾವಿಸಿವೆ.
PublicNext
08/04/2022 12:45 pm