ಬೆಂಗಳೂರು: ಕಣ್ಣು ಹಾಯಿದಷ್ಟು ಗರಿ-ಗರಿ ನೋಟು, ನೋಟಿನಲ್ಲೇ ಗೋಡೆ ಕಟ್ಟಿದಂತಿರೋ ಚಿತ್ರಣ, ಕಂತೆ-ಕಂತೆ ನೋಟುಗಳನ್ನು ಬೆರಗು ಗಣ್ಣಿನಿಂದ ನೋಡುತ್ತಿರುವ ಜನ. ಇವೆಲ್ಲ ಕಂಡು ಬಂದಿದ್ದು ಕುಮಾರಸ್ವಾಮಿ ಲೇಔಟ್ ಠಾಣೆ ಮುಂಭಾಗದಲ್ಲಿ. ಅವ್ರು ಸಣ್ಣ ಪುಟ್ಟ ಕಳ್ಳತಮಾಡಿಕೊಂಡು ಜೈಲು ಸೇರಿದ್ದವರು, ಹಳೇ ಕೇಸ್ ನಡೆಸಲು, ಲಾಯರ್ ಫೀಸ್ ಕಟ್ಟಲು ಹಣಕ್ಕಾಗಿ ಮತ್ತೆ ಕಳ್ಳತನ ಪ್ಲಾನ್ ಮಾಡಿದ್ರು. ಎರಡು ಮೂರು ಲಕ್ಷ ಹಣ ಸಿಕ್ರೆ ಸಾಕು ಅಂತ ಮನೆ ಕನ್ನ ಹಾಕಿದ್ದ ಕಳ್ಳರಿಗೆ ಸಿಕ್ಕಿದ್ದು ಬರೋಬ್ಬರಿ ಎರಡು ಕೋಟಿ ಕ್ಯಾಶ್. ಆಟೋ ಡ್ರೈವರ್ ಸುನಿಲ್ ಹಾಗೂ ದಿಲೀಪ್ ಕೋಟಿ ಕಳ್ಳರಾಗಿದ್ದು, ಬಂಧಿತರಿಂದ 1.76 ಕೋಟಿ ನಗದು ಹಾಗೂ 12 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ.
ಅಷ್ಟಕ್ಕೂ ಇವರು ಕಳ್ಳತನ ಮಾಡಿದ್ದು ಮಾಲೀಕ ಸಂದೀಪ್ ಲಾಲ್ ಮನೆಯಲ್ಲಿ .ಹಿಂದೆ ಸುನೀಲ್ ಒಮ್ಮೆ ಸಂದೀಪ್‌ಲಾಲ್ ನ ತನ್ನ ಆಟೋದಲ್ಲಿ ಮನೆ ಮುಂದೆ ಡ್ರಾಪ್ ಮಾಡಿದ್ದ. ಈ ವೇಳೆ ಸಂದೀಪ್ ಲಾಲ್ ತಂದೆ ಮನಮೋಹನ್ ಲಾಲ್ ವ್ಯಕ್ತಿಯೊಬ್ಬನಿಗೆ ಕಂತೆ ಕಂತೆ ಹಣ ಕೊಟ್ಟಿದ್ದ. ಅದನ್ನ ನೋಡಿದ್ದ ಸುನೀಲ್ ಕಣ್ಣು ಕೆಂಪಾಗಿತ್ತು. ತಮ್ಮ ಪ್ಲಾನ್ ಗೆ ಈ ಮನೆ ಓಕೆ ಅಂತ ಸ್ನೇಹಿತ ದಿಲೀಪ್ ಗೆ ಹೇಳೆ ಮೂಹೂರ್ತ ಫಿಕ್ಸ್ ಮಾಡಿದ್ರು. ಮಾರ್ಚ್ 28ರಂದು ಮನೆ ಬಳಿ ಬಂದು ವಾಚ್ ಮಾಡ್ತಿದ್ದ. ಸುನೀಲ್ ಮತ್ತು ದಿಲೀಪ್ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಖದೀಮರು ಅದೇ ರಾತ್ರಿ 12 ಗಂಟೆಗೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಸುಮಾರು ಅರ್ಧ ಗಂಟೆಗಳ ತಡಕಾಡಿದ ಖದೀಮರಿಗೆ ಏನು ಸಿಕ್ಕಿರಲಿಲ್ಲ. ಮನೆಯ ಸಜ್ಜೆ ಮೇಲಿದ್ದ ಚೀಲ ಅನುಮಾನಾಸ್ಪದವಾಗಿ ಇರುವುದನ್ನು ಗಮನಿಸಿದ ಖದೀಮರು ಅದನ್ನ ತೆಗೆದು ನೋಡಿದಾಗ 2 ಕೋಟಿ ರೂ.ಹಣ ಇರುವುದನ್ನು ನೋಡಿ ಕಳ್ಳರೇ ಶಾಕ್ ಗೆ ಒಳಗಾಗಿದ್ದಾರೆ. ಕೋಟಿ-ಕೋಟಿ ಹಣ ಸಿಕ್ಕ ಖುಷಿಗೆ ಮನೆಯಲ್ಲಿದ್ದ ಫಾರಿನ್ ಬ್ರಾಂಡ್ ಮದ್ಯ ಸೇವಿಸಿ ಸಂಭ್ರಮಿಸಿದ್ದಾರೆ. ನಂತರ ಎರಡು ಕೋಟಿ ಹಣದ ಗುಡ್ಡೆಯನ್ನು ಸಮನಾಗಿ ಆರೋಪಿಗಳು ಹಂಚಿಕೊಂಡಿದ್ದಾರೆ. ದಿಲೀಪ್ ಕದ್ದ ಹಣದಲ್ಲಿ ತಂದೆ ತಾಯಿಗೆ ಚಿನ್ನಾಭರಣ ಕೊಡಿಸಿದ್ದ. ಕಳ್ಳತನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮನೆಯಲ್ಲಿ ಪತ್ತೆಯಾದ ಹಣದ ಮೂಲ ಕುರಿತು ತನಿಖೆ ನಡೆಸುವಂತೆ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
07/04/2022 10:55 pm