ಬೆಂಗಳೂರು: ಜೆ.ಜೆ.ಆರ್ ನಗರದ ಚಂದ್ರು ಕೊಲೆ ಉರ್ದು ಮಾತನಾಡಿಲ್ಲ ಅನ್ನೋ ಕಾರಣಕ್ಕೇನೆ ಆಗಿದೆ. ಹೀಗಂತ ಚಂದ್ರು ಪೊಷಕರು ಆರೋಪಿಸಿದ್ದಾರೆ. ಕುಟುಂಬಸ್ತರು ಶಾಂತಿನಗರದ ಕ್ರೈಸ್ತ ಸ್ಮಶಾನದಲ್ಲಿ ಕ್ರೈಸ್ತ ಸಂಪ್ರದಾಯದಂತೆ ಚಂದ್ರು ಅಂತ್ಯಕ್ರಿಯೆ ನಡೆಸಿದ್ರು.
ಅಂತ್ಯಕ್ರಿಯೆ ಬಳಿಕೆ ಚಂದ್ರು ಅಜ್ಜಿ ಮಾತನಾಡಿ, ಸೈಮನ್ ಬರ್ತಡೆ ಅಂತ ಚಂದ್ರು ಹೋಗಿದ್ದ. ಈ ವೇಳೆ ಗಲಾಟೆ ಆಗಿದೆ. ಗಲಾಟೆ ವೇಳೆ ಆರೋಪಿಗಳು ಮೂರ್ನಾಲ್ಕು ಜನರನ್ನ ಸೇರಿಸಿದ್ದಾರೆ. ಅದೇ ಸಮಯಕ್ಕೆ ಸೈಮನ್ ಕೂಡ ಅಲ್ಲಿ ಹುಡುಗ್ರನ್ನ ಕರ್ಕೊಂಡ್ ಬರ್ತಿನಿ ಅಂತ ಹೋಗಿದ್ದಾನೆ. ಆದರೆ, ಚಂದ್ರು ನಾನೇನ್ ತಪ್ಪು ಮಾಡಿಲ್ಲ ಅಂತ ಗಾಡಿ ಬಳಿ ನಿಂತಿದ್ದಾಗ ಹಲ್ಲೆ ಮಾಡಿದ್ದಾರೆ. ಉರ್ದು ಮಾತನಾಡು ಅಂತ ಗಲಾಟೆ ಮಾಡಿ ಕೊಲೆ ಮಾಡಿದ್ದಾರೆಂದು ಚಂದ್ರು ಅಜ್ಜಿ ಹೇಳಿದ್ದಾರೆ. ಚಂದ್ರು ತಾಯಿ ಕೂಡ ಅದನ್ನೇ ಆರೋಪಿಸಿದ್ದಾರೆ.
PublicNext
06/04/2022 05:21 pm