ಬೆಂಗಳೂರು: ಮನೆ ಮುಂದೆ ರಾತ್ರಿ ಬೈಕ್ ಪಾರ್ಕ್ ಮಾಡುವ ಮುನ್ನ ಹುಷಾರ್. ನಸೀಬ್ ಕೈಕೊಟ್ಟರೆ ನಿಮ್ಮ ಬೈಕ್ ಮಿಸ್ ಆಗೋದು ಪಕ್ಕಾ. ಮಿಡ್ ನೈಟ್ ಎಂಟ್ರಿ ಕೋಡುವ ಕಳ್ಳರ ಗ್ಯಾಂಗ್ ನಿಮ್ಮ ಬೈಕ್‌ಗಳನ್ನ ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಾರೆ. ಚಂದ್ರಲೇಔಟ್ ರಾತ್ರೋರಾತ್ರಿ ಬೈಕ್ ಎಗರಿಸಿ ಎಸ್ಕೇಪ್ ಆಗಿರೋ ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡಿ.27ರಂದು ಮನೆ ಮುಂದೆ ನಿಲ್ಲಿಸಿದ ಯಮಹಾ ಆರ್ ಎಕ್ಸ್ ಬೈಕ್ ಲಾಕ್ ಮುರಿದು ಎಗರಿಸಿ ಎಸ್ಕೇಪ್ ಆಗಿದ್ದಾರೆ. ಮುಂಜಾನೆ ಎದ್ದು ನೋಡಿದಾಗ ಬೈಕ್ ಕಳ್ಳತನ ಕೃತ್ಯ ಬೆಳಕಿಗೆ ಬಂದಿದ್ದು, ಈ ಕುರಿತು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಬೈಕ್ ಮಾಲಿಕ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಅರೋಪಿಗಳಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.
PublicNext
05/04/2022 12:07 pm