ಬೆಂಗಳೂರು: ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿದ್ದಾರೆ. ಆರು ತಿಂಗಳ ಹಿಂದೆ ಸ್ವಯಂ ನಿವೃತ್ತಿ ಕೋರಿ ಕಳೆದ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೇಂದ್ರ ಗೃಹ ಇಲಾಖೆ ನಿರ್ಧಾರ ಪುನರ್ ಪರಿಶೀಲನೆಗೆ ಅವಕಾಶ ನೀಡಿತ್ತು. ಮೂರು ತಿಂಗಳೊಳಗೆ ಪುನರ್ ಪರಿಶೀಲನೆ ಬಗ್ಗೆ ತಿಳಿಸಬೇಕಿತ್ತು.
ಆದರೆ ಭಾಸ್ಕರ್ ರಾವ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಕೇಂದ್ರ ಗೃಹ ಇಲಾಖೆ ಮಾತ್ರ ಈ ಬಗ್ಗೆ ಆರು ತಿಂಗಳು ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಆಲ್ ಇಂಡಿಯಾ ಸರ್ವೀಸ್ ಆ್ಯಕ್ಟ್‌ನ ಅಧಿಕಾರ ಬಳಸಿ ಭಾಸ್ಕರ್ ರಾವ್ ತಮ್ಮ ಹುದ್ದೆಯನ್ನ ತೊರೆದಿದ್ದಾರೆ. AIS. ಆ್ಯಕ್ಟ್‌ನ 16(2) ಕಲಂ ಅಡಿಯಲ್ಲಿ 50 ವರ್ಷ ದಾಟಿರುವ ಹಾಗೂ 20 ವರ್ಷ ಸೇವೆ ಪೂರ್ಣಗೊಳಿಸಿ ಸದ್ಯ ಸೇವೆಯಲ್ಲಿರುವ ಯಾವುದೇ ಕೇಂದ್ರ ಲೋಕ ಸೇವಾ ಆಯೋಗದ ಅಭ್ಯರ್ಥಿ ಸ್ವಯಂ ನಿವೃತ್ತಿ ಹೊಂದಬಹುದುದಾಗಿದೆ.
PublicNext
02/04/2022 09:59 pm