ದೊಡ್ಡಬಳ್ಳಾಪುರ: ಮಾನಸಿಕ ಖಿನ್ನತೆಗೆ ಬಳಲುತ್ತಿದ್ದ ಯುವಕ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹವನ್ನ 10 ಕಿ.ಮಿ ವರೆಗೂ ರೈಲು ಹೊತ್ತೊಯ್ದಿದೆ.
ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸಮೀಪದ ವೀರಾಪುರದ ರೈಲ್ವೆ ಟ್ರ್ಯಾಕ್ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಮೃತ ಯುವಕ 31 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ. ತಿಪ್ಪಾಪುರ ಗ್ರಾಮದ ನಿವಾಸಿಯಾದ ಮೃತ ಯುವಕ ಇಂಡೋ ಮಿಮ್ ಕಂಪನಿಯ ಕಾರ್ಮಿಕನಾಗಿದ್ದ.
ಕಳೆದ ಕೆಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳತ್ತಿದ್ದು ಇಂದು ಬೆಳಗ್ಗೆ ವೀರಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ದೇಹವನ್ನು ವೀರಾಪುರ ಗ್ರಾಮದಿಂದ 10 ಕಿ.ಮೀ ದೂರದಲ್ಲಿರುವ ತಿರುಮನಗೊಂಡಹಳ್ಳಿ ವರೆಗೂ ರೈಲು ಹೊತ್ತೊಯ್ದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
29/03/2022 08:21 pm