ಬೆಂಗಳೂರು: ಮಹಿಳೆಯ ವಿಚಾರಕ್ಕಾಗಿ ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ್ದ ಐವರು ರೌಡಿ ಶೀಟರ್ ಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ರೌಡಿಶೀಟರ್ ಅರುಣ್ ಅಲಿಯಾಸ್ ನಾಯ್ಡು, ಯಶ್ವಂತ್ ,ಕಾರ್ತಿಕ್ ,ವಿಶಾಲ್ ಮತ್ತು ಸಂಜಯ್ ಎಂಬುವರನ್ನ ಬಂಧಿಸಿ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ.
ಮಂಜುಶ್ರೀ ಎಂಬ ಮಹಿಳೆಗಾಗಿ ಈ ಕೊಲೆ ಯತ್ನ ನಡೆದಿದೆ ಎನ್ನಲಾಗಿದೆ. ಮಂಜುಶ್ರೀ ಎಂಬಾಕೆ ಬರೋಬ್ಬರಿ ಏಳು ವರ್ಷ ಶ್ರೀಕಾಂತನ ಜೊತೆಯಲ್ಲಿದ್ಳು. ಶ್ರೀಕಾಂತನಿಗಿಂತ ಮುಂಚೆ ಮಂಜುಶ್ರೀಗೆ ಬೇರೊಬ್ಬನ ಜೊತೆ ಮದ್ವೆಯಾಗಿತ್ತಂತೆ. ಹೆಚ್ಚು ಕಮ್ಮಿ ಹತ್ತು ವರ್ಷಗಳ ಸಂಸಾರಕ್ಕೆ ವಿಚ್ಚೇದನ ನೀಡುವ ಮೂಲಕ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟಿದ್ದಳು.
ಶ್ರೀಕಾಂತನ ನಂತರ ಮಂಜುಶ್ರೀ ರೌಡಿಶೀಟರ್ ಅರುಣ್ ಕುಮಾರ್ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ಳು.. ಇದನ್ನ ಸಹಿಸದ ಶ್ರೀಕಾಂತ್ ಮಂಜುಶ್ರೀಗೆ ಪದೇ ಪದೇ ಕಾಲ್ ಮಾಡಿ ಕಾಟ ಕೊಡ್ತಿದ್ನಂತೆ. ಈ ವಿಚಾರವನ್ನ ಮಂಜುಶ್ರೀ ಅರುಣ್ ಗೆ ತಿಳಿಸಿದ್ದಾಳೆ. ನಂತರ ಶ್ರೀಕಾಂತನನ್ನ ಮುಗಿಸಿಯೇ ಬಿಡ್ಬೇಕು ಅಂತ ಅರುಣ್ ಪ್ಲಾನ್ ಮಾಡಿ ಕೊಲೆಗೆ ಯತ್ನಿಸಿದ್ದ. ರೌಡಿ ಶೀಟರ್ ಗಳಿಂದ ತಪ್ಪಿಸಿಕೊಂಡು ಬಂದ ಶ್ರೀಕಾಂತ್ ಪೊಲೀಸರಿಗೆ ದೂರು ನೀಡಿದ್ದಾನೆ. ಇನ್ನು ಈ ಹಲ್ಲೆ ಮಾಡೋದನ್ನ ಅರುಣ್ ಗ್ಯಾಂಗ್ ನಲ್ಲಿದ್ದವನೇ ವಿಡಿಯೋ ಮಾಡಿದ್ದ .ಆ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ. ಸದ್ಯ ದೂರಿನ ಅನ್ವಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. .
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
26/03/2022 04:54 pm