ಬೆಂಗಳೂರು: ಪತ್ನಿಯನ್ನು ಹತ್ಯೆ ಮಾಡಿ ಪತಿ ಪರಾರಿಯಾಗಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಚಂದ್ರಸಂದ್ರದಲ್ಲಿ ನಡೆದಿದೆ.. ಕಮಲಾದೇವಿ(45) ಹತ್ಯೆಯಾದ ಮಹಿಳೆ.. ನೇಪಾಳ ಮೂಲದ ಆರೋಪಿ ತೇಜ್ ಬಹದ್ದೂರ್ ಹಾಗೂ ಕೊಲೆಯಾದ ಕಮಲಾದೇವಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಕೆಲ ವರ್ಷದಲ್ಲಿ ಸಂಸಾರದಲ್ಲಿ ಬಿರುಕು ಮೂಡಿತ್ತು.. ಕಳೆದ 6 ವರ್ಷಗಳಿಂದ ಕಮಲಾದೇವಿ ತನ್ನ ಮಗನೊಂದಿಗೆ ಬೆಂಗಳೂರಲ್ಲಿ ವಾಸವಿದ್ದಳು, ಆರೋಪಿ ತೇಜ್ ಬಹದ್ದೂರ್ ತನ್ನ ಇಬ್ಬರು ಪುತ್ರಿಯರೊಂದಿಗೆ ನೇಪಾಳದಲ್ಲಿ ವಾಸವಿದ್ದ.. ಎರಡ್ಮೂರು ದಿನಗಳ ಹಿಂದೆ ಬಂದು ಪತ್ನಿಯ ಮನೆಯಲ್ಲಿ ವಾಸವಾಗಿದ್ದು, ರಾತ್ರಿ ವೇಳೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ.. ಗಲಾಟೆಯಲ್ಲಿ ಆರೋಪಿಯು ಪತ್ನಿಯ ಕುತ್ತಿಗೆಗೆ ಮೂರು ಬಾರಿ ಗಾಯಗೊಳಿಸಿ ಓಡಿ ಹೋಗಿದ್ದಾನೆ.. ಘಟನೆಯ ಮಾಹಿತಿ ತಿಳಿದ ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ ಎಂದು ಪೂರ್ವ ವಿಭಾಗದ ಡಿಸಿಪಿ ತಿಳಿಸಿದರು...
PublicNext
26/03/2022 03:31 pm