ದೊಡ್ಡಬಳ್ಳಾಪುರ: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿ ಇರುವ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದ ಇಬ್ಬರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಾಲೂಕು ಪಂಚಾಯಿತಿ ರಸ್ತೆಯಲ್ಲಿ ಇಂದು ಶುಕ್ರವಾರ ಮಧ್ಯಾಹ್ನ 2: 40ರ ಸಮಯದಲ್ಲಿ ಇಬ್ಬರು ಯುವಕರು ಪದೇ ಪದೇ ಬೈಕ್ ವೀಲ್ಹಿಂಗ್ ಮಾಡಿ ವಾಹನ ಸವಾರಿಗೆ ಭಯವನ್ನುಂಟು ಮಾಡಿದ್ದರು, ಬೈಕ್ ವೀಲ್ಹಿಂಗ್ ಪುಂಡರ ಮೇಲೆ ಸಾರ್ವಜನಿಕರು ಪೊಲೀಸರು ಮಾಹಿತಿ ನೀಡಿದ್ದರು.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಗೋವಿಂದ್ ಅವರ ತಂಡ ತಕ್ಷಣವೇ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಪುಂಡರನ್ನ ಸೆರೆಹಿಡಿದಿದ್ದಾರೆ. ಬಂಧಿತರು ಶಿವಪುರದ ಮಹಮ್ಮದ್ ಸಾದ್ (20), ಪುನೀತ್ (21) ಗುರುತಿಸಲಾಗಿದೆ. ಎರಡು ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
PublicNext
25/03/2022 06:01 pm