ಬೆಂಗಳೂರು: ಕುಡಿದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆಆಟೋ ಚಾಲಕನನ್ನು ಅಟ್ಟಾಡಿಸಿ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಕೊಲೆ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಜೀವನಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ದೂಫನಹಳ್ಳಿ ನಿವಾಸಿ ಮಂಜುನಾಥ್ ನನ್ನ ಕೊಲೆ ಮಾಡಿದ ಆರೋಪದಡಿ ಮಧುಸೂದನ್ ಹಾಗೂ ಯತೀಶ್ ಗೌಡನನ್ನು ಬಂಧಿಸಿಲಾಗಿದೆ.
ಜಿ.ಡಿ ಬಾರ್ ಬಳಿ ಮಾ.14ರ ರಾತ್ರಿ ಮೃತ ಮಂಜುನಾಥ ಹಾಗೂ ಆರೋಪಿಗಳ ನಡುವೆ ಜಗಳವಾಗಿತ್ತು. ಈ ವೇಳೆ ಆರೋಪಿಗಳು ಮಂಜುನಾಥ್ ನ ಅಟ್ಟಾಡಿಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
16/03/2022 09:01 pm