ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಪುಂಡರ ಸೆರೆ

ಬೆಂಗಳೂರು: ನಡುರಾತ್ರಿ ಅಫ್ಘಾನಿಸ್ತಾನ ವಿದ್ಯಾರ್ಥಿಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ಸುಲಿಗೆಕೋರರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಅಫ್ಘಾನ್ ಪ್ರಜೆಯ ಕುತ್ತಿಗೆ ಇರಿದು ಮೊಬೈಲ್ ದೋಚಿ ಅಟ್ಟಹಾಸ ಮೆರೆದಿದ್ದ ವೈಭವ್, ರಾಕೇಶ್, ಚಂದ್ರಶೇಖರ್ ಹಾಗೂ ದರ್ಶನ್ ರನ್ನ ಬಂಧಿಸಲಾಗಿದೆ.

ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಘ್ಪಾನ್ ವಿದ್ಯಾರ್ಥಿಗಳು ಮಾರ್ಚ್ 11 ರಂದು ತಡರಾತ್ರಿ ಸ್ನೇಹಿತರ ಮನೆಗೆ ಹೋಗಿ ಜ್ಞಾನಜ್ಯೋತಿ ನಗರದ ತಮ್ಮ ನಿವಾಸಕ್ಕೆ ವಾಪಸ್ ಆಗುವಾಗ ಎರಡು ಬೈಕ್ ನಲ್ಲಿ ನಾಲ್ಕು ಮಂದಿ ಬಂದು ಅಡ್ಡಗಟ್ಟಿ ಸುಲಿಗೆ ಮಾಡಿದ್ರು.ಮೊಬೈಲ್ ‌ಕೊಡಲು ನಿರಾಕರಿಸಿದಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮಾರ್ಚ್ 11ರಂದು ಆರೋಪಿ ವೈಭವ್ ಹುಟ್ಟುಹಬ್ಬವನ್ನ ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡಿಕೊಂಡಿದ್ದ. ನಂತರ ಎರಡು ಬೈಕ್ ಮೇಲೆ ಬಂದಿದ್ದ ನಾಲ್ವರು‌ ರಾತ್ರಿ 2 ಗಂಟೆ ಹೊತ್ತಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ. ಈ ವೇಳೆ ಅಫ್ಘಾನ್ ಪ್ರಜೆಗಳಾದ ಇಬ್ಬರು ಸ್ನೇಹಿತರು ಖಾಸಗಿ ಹೋಟೆಲ್ ನಲ್ಲಿ ಪಾರ್ಟಿ ಮುಗಿಸಿ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳ್ಳಾಲ ಮುಖ್ಯರಸ್ತೆ ಕಡೆಗೆ ಮನೆಗೆ ಹೋಗೋಕೆ ಅಂತಾ ಬರ್ತಿದ್ದ ವೇಳೆ ಕೃತ್ಯ ನಡೆಸಿದ್ರು. ಇನ್ನು ಜ್ಞಾನಭಾರತಿ ಠಾಣೆ ಇನ್ಸ್ ಪೆಕ್ಟರ್ ಲಕ್ಷ್ಮಣ್ ನಾಯಕ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಸುಮಾರು 15 ಕಿ.ಮೀ ದೂರದಷ್ಟು 150 ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

14/03/2022 07:57 pm

Cinque Terre

2.75 K

Cinque Terre

0

ಸಂಬಂಧಿತ ಸುದ್ದಿ