ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಣಕ್ಕಾಗಿ ಯುವಕನ ಅಪಹರಣ; ಖದೀಮರು ಸೆರೆಮನೆಗೆ

ಯಲಹಂಕ: ಪರಿಚಯಸ್ಥರೇ ಹಣಕ್ಕಾಗಿ ವಿದ್ಯಾರಣ್ಯಪುರದ ಟೀಚರ್ಸ್ ಲೇಔಟ್‌ನಲ್ಲಿ ಶ್ರೀನಿವಾಸ್ ಎಂಬ ಯುವಕನನ್ನು ಮಾರ್ಚ್‌ 6ರಂದು ರಾತ್ರಿ ಅಪಹರಿಸಿದ್ದರು. ಈ ಬಗ್ಗೆ ಶ್ರೀನಿವಾಸ್ ತಾಯಿ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ಅಪಹರಿಸಿ 7 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದ ಇಬ್ಬರು ಖದೀಮರಿಗೆ ವಿದ್ಯಾರಣ್ಯಪುರ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.

ಪ್ರಕರಣ ದಾಖಲಾದ 12 ಗಂಟೆಗಳೊಳಗೆ ಪ್ರಮುಖ ಆರೋಪಿ ರವಿ ಮತ್ತು ಎರಡನೇ ಆರೋಪಿ ಮಾದೇಶ್‌ನನ್ನು ಬಂಧಿಸಲಾಗಿದೆ. ಆರೋಪಿಗಳಿಬ್ಬರೂ ಈ ಮೊದಲು ಶ್ರೀನಿವಾಸ್‌ಗೆ ಹಣ ನೀಡುವಂತೆ ಪೀಡಿಸುತ್ತಿದ್ದರು. ಹಣ ನೀಡಲು ಶ್ರೀನಿವಾಸ್ ನಿರಾಕರಿಸಿದ್ದರಿಂದ ಅಪಹರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿ ಜೈಲು ಸೇರಿದ್ದಾರೆ.

Edited By : Vijay Kumar
Kshetra Samachara

Kshetra Samachara

08/03/2022 10:48 am

Cinque Terre

1.24 K

Cinque Terre

0