ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಡಿಶಾದಿಂದ ಗಾಂಜಾ ತಂದು ಮಾರಾಟ- ಆರೋಪಿಗಳು ಅಂದರ್

ಬೆಂಗಳೂರು: ಒಡಿಶಾದಿಂದ ಮಾದಕ ವಸ್ತಗಳನ್ನು ತಂದು ಬೆಂಗಳೂರಿನ ಜಿಗಣಿ, ಎಲೆಕ್ಟ್ರಾನಿಕ್ ಸಿಟಿ, ಎ.ನಾರಾಯಣಪುರ, ಮಹದೆರವಪುರದ ಲೌರಿ ಸ್ಕೂಲ್ ಬಳಿಯ ಪಾನ್ ಶಾಪ್‌ಗಳ ಮೂಲಕ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೈಟ್‌ ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸರು ಯಶ್ವಸಿಯಾಗಿದ್ದಾರೆ.

ಪ್ರದೀಪ್ ಕುಮಾರ್ ಬಿನ್ ಸನಾವುತ್ ರಾವುತ್ ಮತ್ತು ಸಜಾನ್ ಅಲಿ ಬಿನ್ ಸಹಾದತ್ ಅಲಿ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 1 ಕೆಜಿ ಗಾಂಜಾ ಹಾಗೂ 18 ಕೆಜಿ ತೂಕದ ಗಾಂಜಾ ಚಾಕ್ಲೆಟ್ ಪ್ಯಾಕೇಟ್ ವಶಪಡಿಸಿಕೊಳ್ಳಲಾಗಿದ್ದು, ಸುಮಾರು 2 ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ.

ಕ್ಷಿಪ್ರ ಕಾರ್ಯಾಚರಣೆ ನಡೆಸಿದ ವೈಟ್ ಫೀಲ್ಡ್ ವಿಭಾಗದ ಎಸಿಪಿ ಶಾಂತ ಮಲ್ಲಪ್ಪ, ಮಹದೇವಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹೆಚ್.ಹರಿಯಪ್ಪ ಹಾಗೂ ಸಿಬ್ಬಂದಿ ಕಾರ್ಯಕ್ಕೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಮೆಚ್ಚುಗೆ ವ್ಯಕ್ತಪಡಿಸಿದರು.

Edited By :
Kshetra Samachara

Kshetra Samachara

05/03/2022 11:36 am

Cinque Terre

1.95 K

Cinque Terre

0

ಸಂಬಂಧಿತ ಸುದ್ದಿ