ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಟಿಪಿ ಪಡೆದು ವಂಚಿಸುತ್ತಿದ್ದ ಸೈಬರ್ ಕಳ್ಳರ ಬಂಧನ

ಯಲಹಂಕ: ಬೆಂಗಳೂರು ಮಹಾನಗರ ಪಾಲಿಕೆ ಹೆಸರಿನಲ್ಲಿ ಆನ್ಲೈನ್ ವಂಚಕರು ಮೋಸ ಮಾಡುವ ವಿಧಾನ ಕಂಡುಕೊಂಡಿದ್ದಾರೆ. ಬಿಬಿಎಂಪಿ ಯ ಬೂತ್ ಲೆವೆಲ್ ಆಫೀಸರ್ಸ್ ಎಂದು ಕರೆ ಮಾಡಿ, ಎಲ್ಲೋವೆನ್ಸ್ ಫೀ ಪಾವತಿ ಮಾಡುತ್ತೇವೆ ಎನ್ನುತ್ತಾ ಡೇಬಿಡ್ ಕಾರ್ಡ್, ಸಿವಿವಿ, ಒಟಿಪಿ ಪಡೆದು ಕರೆ ಮಾಡಿ ಜನರ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಚಾಲಾಕಿ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳಾದ ಉತ್ತರ ಭಾರತ ಮೂಲದವರಾದ ಶಿವಪ್ರಸಾದ್ & ಪಂಕಜ್ ಚೌದರಿಯನ್ನು ಯಲಹಂಕದ ಈಶ್ಯಾನ ವಿಭಾಗ ಸಿಇಎನ್ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿವಪ್ರಸಾದ್ ಸೈಬರ್ ಕೃತ್ಯಕ್ಕೆ ಪಂಕಜ್ ಚೌದರಿ ನಕಲಿ ಸಿಮ್ಕಾರ್ಡ್, ನಕಲಿ ಬ್ಯಾಂಕ್ ಅಕೌಂಟ್ ಖಾತೆ ನೀಡುತ್ತಿದ್ದ. ಖದೀಮರು ಮೈಸೂರು ಜೈಲಿನಿಂದ‌ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದರು.

ಈ ಹಿಂದೆ ಕೂಡ ಶಿವಮೊಗ್ಗ, ಮೈಸೂರು ದಾವಣೆಗೆರೆ, ಮಹಾರಾಷ್ಟ್ರ, ಅಸ್ಸಾಂ ರಾಜ್ಯಗಳಲ್ಲಿ ಸೈಬರ್ ವಂಚನೆ ಕೃತ್ಯ ಎಸಗಿದ್ದ ಈ ಕಿರಾತಕರ ಬಂಧನದಿಂದ ಎಂಟು ಸೈಬರ್ ಅಪರಾಧ ಕೃತ್ಯ ಬೆಳಕಿಗೆ ಬಂದಿವೆ. ಈಶಾನ್ಯ ವಿಭಾಗ ಯಲಹಂಕದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ತನಿಖೆ ಮುಂದುವರೆಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

26/02/2022 11:18 am

Cinque Terre

1.74 K

Cinque Terre

0

ಸಂಬಂಧಿತ ಸುದ್ದಿ