ಬೆಂಗಳೂರು: ನಿವೃತ್ತ ಎಸಿಪಿಗೆ ಸೈಟ್ ಮಾರಾಟ ಮಾಡಿಕೊಡುವುದಾಗಿ ವಂಚಿಸಿದ್ದ ಆರೋಪಿ ವಿರುದ್ಧ ಈಗ ಮತ್ತೊಂದು ಬಲವಾದ ಆರೋಪ ಕೇಳಿ ಬಂದಿದೆ. ನಿರ್ಮಾಣ್ ಶೆಲ್ಟರ್ಸ್ ಎಂ.ಡಿ ಲಕ್ಷ್ಮಿನಾರಾಯಣ್ ವಿರುದ್ಧ ಆಕ್ರಮ ಲೇಔಟ್ ನಿರ್ಮಾಣದ ಆರೋಪ ಕೇಳಿ ಬಂದಿದೆ. ಈ ಹಿಂದೆ ಲಕ್ಷ್ಮಿನಾರಾಯಣ್ ನಿವೃತ್ತ ಎಸಿಪಿ ಲವಕುಮಾರ್ ಎಂಬುವರಿಗೆ ಸೈಟ್ ಮಾರಾಟ ಮಾಡುವುದಾಗಿ ವಂಚಿಸಿದ್ದ ಆರೋಪದಲ್ಲಿ, ಬೆಂಗಳೂರಿನ ಆಶೋಕನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು
ಸದ್ಯ ಕಲ್ಲಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಸರ್ಗ ಲೇಔಟ್ ನಿರ್ಮಾಣ ಮಾಡಿದ್ದು ಇಲ್ಲಿ BMRD ನಿಯಮಗಳನ್ನ ಗಾಳಿಗೆ ತೂರಿ ಸಿಎ ಹಾಗೂ ಪಾರ್ಕ್ ಗಳ ಜಾಗದಲ್ಲಿ ಐಷಾರಾಮಿ ವಿಲ್ಲಾಗಳ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಹಲವು ನಿವೇಶನಗಳಿಗೆ ನಕಲಿ ದಾಖಲೆಗಳ ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಲಾಗ್ತಾ ಇದೆ.
ಈ ಕುರಿತು ಬಿಎಂಆರ್ ಡಿ ಹಾಗೂ ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ಸಾಲು ಸಾಲು ದೂರು ನೀಡಲಾಗಿದೆ.ಇಷ್ಟೆಲ್ಲ ಅಕ್ರಮ ಕಣ್ಣೇದುರೆ ಇದ್ರು ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಇದ್ರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ ಎಂದು ದೂರುದಾರ ಸದಾನಂದ ಆರೋಪಿಸಿದ್ದಾರೆ.
PublicNext
25/02/2022 11:24 am