ಬೆಂಗಳೂರು : ಸಂಬಳ ಕಡಿಮೆ ಅಂತ ನೇಪಾಳಿಗಳನ್ನ ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದೀರಾ.? ಎರಡು ಸಾವಿರ ಸಂಬಳ ಜಾಸ್ತಿ ಆದ್ರೂ ಪರವಾಗಿಲ್ಲ ಇನ್ಮುಂದೆ ಮುಂದೆ ಸ್ಥಳೀಯರಿಗೆ ಕೆಲಸ ಕೊಡಿ. ಇಲ್ಲದಿದ್ರೆ ನಿಮ್ಮ ಮನೆ ಗುಡಿಸಿ ಗುಂಡಾಂತರ ಮಾಡೋದು ಗ್ಯಾರಂಟಿ.
ಎಸ್.. ಮನೆ ಕೆಲಸದಾಕೆಯನ್ನ ನಂಬಿ ಕೋಟಿ ಕುಳವೊಂದು ಹೆಚ್ಚು ಕಡಿಮೆ 1 ಕೋಟಿ ನಗನಾಣ್ಯ ಕಳೆದುಕೊಂಡಿದೆ. ಬೆಂಗಳೂರಿನ ಬಸವೇಶ್ವರ ನಗರದ ಗೃಹಲಕ್ಷ್ಮಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.
ವಾಗೀಶ್ವರಿ ಗುರುಕುಮಾರ್ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೆಲಸಕ್ಕಿದ್ದ ನೇಪಾಳಿ ಮಹಿಳೆ ಅನು ಮತ್ತು ಆಕೆಯ ಕುಟುಂಬದಿಂದ ಕೃತ್ಯ ನಡೆದಿದೆ.
ಅಷ್ಟಕ್ಕೂ ಮನೆಯಲ್ಲಿ ಆಗಿದ್ದೇನು ಅಂತ ನೋಡೋದಾದ್ರೆ..ಗೃಹಲಕ್ಷ್ಮೀ ಬಡವಾಣೆಯ ನವಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಕುಟುಂಬದವರು ನಿನ್ನೆ ಬೆಳಿಗ್ಗೆ ಮನೆ ಬಾಗಿಲು ಹಾಕಿ ದೇವಸ್ಥಾನಕ್ಕೆ ಹೋಗಿದ್ರು. ಮನೆ ಕೀಲಿಯನ್ನ ಸೆಕ್ಯೂರಿಟಿ ಬಳಿ ಕೊಟ್ಟು ಕೆಲಸದಾಕೆ ಬಂದ್ರೆ ಕೀ ಕೊಡಲು ಹೇಳಿ ಹೋಗಿದ್ದರು.
ಮನೆ ಕೆಲಸಕ್ಕಾಗಿ ಬಂದ ಖದೀಮರು ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿ ಎದುರು ಮನೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಿದ್ದ ಪತಿಗೆ ಮಾಹಿತಿ ಕೊಟ್ಟಿದ್ಲು. ಪತಿ ಜೊತೆ ಇನ್ನಿಬ್ಬರು ಮನೆಗೆ ಬಂದು ಲಾಕರ್ ಒಡೆದು ಮನೆಯಲ್ಲಿದ್ದ ಸುಮಾರು 80ಲಕ್ಷದ ಚಿನ್ನವನ್ನ ಪ್ಯಾಕ್ ಮಾಡಿದ್ದಾರೆ. ಇದೇ ಸಮಯಕ್ಕೆ ಮನೆಗೆ ವಾಗೀಶ್ವರಿ ಎಂಟ್ರಿ ಕೊಟ್ಟು ಅನು ಕೆಲಸ ಮಾಡ್ತಿದ್ದಾಳೆ ಅಂತ ಅಂದುಕೊಂಡೆ ಮಾತ್ರೆ ನುಂಗಲು ಡೈನಿಂಗ್ ಟೇಬಲ್ ಬಳಿ ಹೋದಾಗ ನೇಪಾಳಿ ಗ್ಯಾಂಗ್ ವಾಗೀಶ್ವರಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಸುತ್ತಿ ಹಲ್ಲೆ ನಡೆಸಿದ್ದಾರೆ. ಮತ್ತೊಂದು ಲಾಕರ್ ಕೀ ಓಪನ್ ಮಾಡಿಸಿ ಎಂಟು ಲಕ್ಷ ನಗದು ಹಣ ದೋಚಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.
ಸದ್ಯ ಆರೋಪಿಗಳು ಚಿನ್ನಾಭರಣದ ಪ್ಯಾಕ್ ಸಮೇತ ಕಾರ್ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಸ್ಕೇಪ್ ಆಗಲು ನಕಲಿ ನಂಬರ್ ಪ್ಲೇಟ್ ಕರ್ ಬಳಸಿದ್ದಾರೆ. ಹೀಗಾಗಿ ಪೂರ್ವನಿಯೋಜಿತ ಕೃತ್ಯ ಎಂಬ ಬಗ್ಗೆ ಡೌಟ್ ಬಂದಿದೆ.
ಘಟನೆ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
-ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
24/02/2022 08:41 am