ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆ ತೆರವಿಗೆ ರೌಡಿ ಶೀಟರ್ ಧಮ್ಕಿ; ನೆರವಿಗೆ ಫೇಸ್ ಬುಕ್ ಮೊರೆ ಹೋದ ನಾರಿ

ಬೆಂಗಳೂರು: ಮಹಿಳೆಗೆ ಮನೆ ಖಾಲಿ ಮಾಡುವಂತೆ ರೌಡಿಶೀಟರ್ ಒಬ್ಬ ಧಮ್ಕಿ ಹಾಕಿದ್ದಾನೆಂದು ಆರೋಪಿಸಲಾಗಿದೆ. ಅರ್ಚನಾ ಮಹದೇವ್ ಎಂಬವರು ಬಸವನಗುಡಿ ಪೊಲೀಸರಿಗೆ ಫೇಸ್ ಬುಕ್ ಮೂಲಕ ದೂರು ನೀಡಿದ್ದಾರೆ.

ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ರೂ ಕ್ರಮ‌ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಹೀಗಾಗಿ ಫೇಸ್ ಬುಕ್‌ ನಲ್ಲಿ ಬರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬಸವನಗುಡಿಯಲ್ಲಿ ಮನೆ ಹೊಂದಿರುವ ಅರ್ಚನಾ, ನನ್ನ ಮನೆ ಬಳಿ ರೋಹನ್ ರೆಡ್ಡಿ ಮತ್ತು ಆತನ ಸಹಚರರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಧಮ್ಕಿ ಹಾಕ್ತಿದ್ದಾರೆ‌. ಮನೆ ಮುಂದೆ ಬಂದು ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ತಮ್ಮ ಕುಟುಂಬ ಬಹಳ ಆತಂಕದಲ್ಲಿದೆ.

ಇಷ್ಟೇ ಅಲ್ಲದೆ, ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸ್ಟೇರಿಂಗ್ ರಾಡ್ ಕಟ್ ಮಾಡಿ ಆಕ್ಸಿಡೆಂಟ್ ಆಗುವಂತೆ ಸೀನ್ ಕ್ರಿಯೇಟ್ ಮಾಡಿದ್ದಾರೆ‌ ಎಂದು ಅರ್ಚನಾ ಆರೋಪಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/02/2022 04:46 pm

Cinque Terre

3.23 K

Cinque Terre

0

ಸಂಬಂಧಿತ ಸುದ್ದಿ