ಬೆಂಗಳೂರು: ರಾತ್ರಿ ವೇಳೆ ಹೋಟೆಲ್ ಮತ್ತು ನಂದಿನಿ ಪಾರ್ಲರ್‌ಗಳಿಗೆ ಕನ್ನ ಹಾಕ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಅಲಿಯಾಸ್ ಕಾಟು ಬಂಧಿತ ಆರೋಪಿಯಾಗಿದ್ದು, ಈತನ ಜೊತೆಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳು ನಂದಿನಿ ಪಾರ್ಲರ್, ಹೋಟೆಲ್‌ಗಳಲ್ಲಿ ಕುಡಿತದ ಚಟಕ್ಕಾಗಿ ಕಳ್ಳತನ ಮಾಡುತ್ತಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಫೆ. 8 ರಂದು ಜೆ.ಪಿ ನಗರದ ನೈವೇದ್ಯ ಹೋಟೆಲ್‌ನಲ್ಲಿ ಕಳ್ಳತನ ಮಾಡಿ 75 ಸಾವಿರ ಹಣ ದೋಚಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಸದ್ಯ ಬಂಧಿತರಿಂದ 20 ಸಾವಿರ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಕೂಡ ಕಳ್ಳತನ ಕೇಸ್‌ನಲ್ಲಿ ಜೈಲು ಸೇರಿದ್ದ ಕಾಟು ಜೈಲಿನಿಂದ ಹೊರಬಂದು ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾನೆ.
PublicNext
18/02/2022 07:22 pm