ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಹುಡ್ಗಿಯನ್ನ ಐವರು ಪ್ರೀತಿಸಿ,ಕೊನೆಗೆ ಹುಡ್ಗಿ ಮನೆ ದೋಚುತ್ತಿದ್ದವರು ಅರೆಸ್ಟ್

ಬೆಂಗಳೂರು: ಆ ಐವರು ಒಂದೇ ಗ್ಯಾಂಗ್ ಅನ್ನೋದಕ್ಕಿಂತ ಅವ್ರು ಆತ್ಮೀಯ ಸ್ನೆಹಿತರು. ಅವ್ರ ಸ್ನೇಹ ಹೇಗಿತ್ತು ಅಂದ್ರೆ ಒಂದು ಅಮಾಯಕ ಹುಡುಗಿಯನ್ನ ಐವರು ಪ್ರೀತಿ ಮಾಡ್ತಿದ್ರು.‌ ಪ್ರೀತಿ ನಾಟಕ ಆಡಿ ಹುಡುಗಿ ಮನೆಗೆ ಹೋಗ್ತಿದ್ದ ಈ ಯುವಕರು ಹಂತ, ಹಂತವಾಗಿ ಮನೆಯಲ್ಲಿದ್ದ ಚಿನ್ನಾಭಾರಣ ದೋಚಿದ್ರು.

ಹೌದು. ನಗರದ ತಿಗಳರಪಾಳ್ಯದಲ್ಲಿ ಈ ಗ್ಯಾಂಗ್ ಕೈ ಚಳಕ ತೋರಿಸಿದೆ. ಹುಡುಗಿಯ ಪೋಷಕರು ಇಲ್ಲದಿದ್ದ ಸಮಯದಲ್ಲಿಯೇ ಹುಡುಗಿ ಮನೆಗೆ ಒಬ್ಬೊಬ್ರೆ ಹೋಗ್ತಿದ್ರು. ಈ ವೇಳೆ ಹುಡುಗಿಯನ್ನ ಪುಸಲಾಯಿಸಿ ಮನೆಯಲ್ಲಿದ್ದ ಚಿನ್ನಾಭರಣ ಎಗರಿಸಿದ್ರು.

ಮನೆಯವರು ಲಾಕರ್ ಚೆಕ್ ಮಾಡಿದಾಗ ಸತ್ಯ ಗೊತ್ತಾಗಿದೆ.‌ ಹುಡುಗಿ ತಂದೆಯಿಂದ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರು ದಾಖಲಾದ ಹಿನ್ನೆಲೆ ಇನ್ಸ್ಪೆಕ್ಟರ್ ರವಿಕುಮಾರ್ ಪಿಎಸ್ ಐ ನವೀನ್ ಪ್ರಸಾದ್ ಪ್ರಕರಣ ಸಂಬಂಧ ಬಸವರಾಜ, ವಿಜಯಕುಮಾರ,ಸಂಜಯ್ ನನ್ನು ಬಂಧಿಸಿದ್ದಾರೆ. ಇನ್ನೂ ತಲೆ‌ಮರೆಸಿಕೊಂಡಿರೋ ನವೀನ್ ಮತ್ತು ಆತನ ಸ್ನೇಹಿತನ

ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.

ಮೊದಲಿಗೆ ಹುಡುಗಿ ಜೊತೆಗೆ ಲವ್ವು ಅಂತಿದ್ದ ಆರೋಪಿಗಳು ಆಮೇಲೆ ಬದುಕೋಕೆ ಕಷ್ಟ ಕಷ್ಟ ಅಂತ ಹೇಳಿಕೊಂಡು, ಹುಡುಗಿಯಿಂದ ಕೂಡ ಸಾಕಷ್ಟು ಹಣ ಮತ್ತು ಒಡವೆ ಪಡೆದಿದ್ರು ಎನ್ನಲಾಗ್ತಿದೆ.

Edited By :
PublicNext

PublicNext

11/02/2022 01:31 pm

Cinque Terre

20.83 K

Cinque Terre

1

ಸಂಬಂಧಿತ ಸುದ್ದಿ