ಬೆಂಗಳೂರು: ಸಿಟಿ ಮಾರ್ಕೆಟ್ ನ ಬಿ.ಕೆ ಅಯ್ಯಂಗಾರ್ ರೋಡ್ ನಲ್ಲಿ ಜಯಚಂದ್ರ ಎಂಬುವರಿಗೆ ಸೇರಿದ ಮಧುರ್ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ವರ್ಮಾ ಎಂಬಾತ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ.
ಸದ್ಯ ಗಣೇಶನನ್ನು ಬಂಧಿಸಿದ ಪೊಲೀಸರು 27 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ರಾಜಸ್ತಾನ ಮೂಲದ ಗಣೇಶ್ ಐದಾರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಮಾಲೀಕ ಇಲ್ಲದಿರುವ ಟೈಮ್ ನೋಡಿ ಅಂಗಡಿಯಲ್ಲಿದ್ದ 30 ಲಕ್ಷ ರೂಪಾಯಿ ಹಣ ದೋಚಿ ಕಣ್ಮರೆಯಾಗಿದ್ದ.
ಈ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಕುಮಾರಸ್ವಾಮಿ ಮಾಲೀಕನ ದೂರಿನನ್ವಯ ಆರೋಪಿಯನ್ನು ರಾಜಸ್ತಾನದಲ್ಲಿ ಬಂಧಿಸಿದ್ದಾರೆ. ಸಾಲ ತೀರಿಸಲು ಹಾಗೂ ಕೌಟುಂಬಿಕ ಕಾರಣಕ್ಕಾಗಿ ಕಳ್ಳತನ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
Kshetra Samachara
04/02/2022 04:47 pm