ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣಕ್ಕಾಗಿ ಕಿಡ್ನಾಪ್ : ಅಪಹರಣವಾದ 3 ಗಂಟೆಯಲ್ಲಿ ಕಿಡ್ನಾಪರ್ಸ್ ಗಳ ಬಂಧನ.

ಯಲಹಂಕ : 30 ಲಕ್ಷ ಹಣ ಕೊಡದ ಹಿನ್ನಲೆ ಇಂಜಿನಿಯರ್ ಯುವಕನನ್ನ ಅಪಹರಣ ಮಾಡಲಾಗಿದ್ಧು, ಅಪಹರಣವಾದ 3 ಗಂಟೆಯಲ್ಲಿ ಯಲಹಂಕ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಫೆ.2 ರಂದು ಬೆಳಗ್ಗೆ 9.40 ಕ್ಕೆ ಯಲಹಂಕದ ರೈತರ ಸಂತೆ ಬಳಿ ಇಂಜಿನಿಯರ್ ಮಾನಸ್ ನನ್ನ ಸ್ಕಾರ್ಪಿಯಾ ವಾಹನದಲ್ಲಿ ನಂದ,ಸುನೀಲ್ ಸೇರಿ ಐದು ಜನರ ತಂಡ ಕಿಡ್ನಾಪ್ ಮಾಡಿದ್ದರು.

30 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು, ಮಾನಸ್ ಜೊತೆಗಿದ್ದ ಯುವತಿ ಪೊಲೀಸರಿಗೆ ಅಪಹರಣ ವಿಷಯ ತಿಳಿಸಿದ ತಕ್ಷಣ ಅಲರ್ಟ್ ಆದ ಯಲಹಂಕ ಠಾಣೆ ಇನ್ಸ್ ಪೆಕ್ಟರ್ ಸತ್ಯನಾರಾಯಣ ಮತ್ತು ಪಿಎಸ್ ಐ ಶೈಲಜಾ ನೇತೃತ್ವದ ತಂಡ ರಚಿಸಿ ಬಂಧನಕ್ಕೆ ಬಲೆ ಬೀಸಿದ್ದರು.

ನಂತರ ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೋಲಾರದತ್ತ ತೆರಳುತ್ತಿರುವ ಮಾಹಿತಿ ಸಿಕ್ಕಿದೆ. ಮಾನಸ್ ಹಾಗೂ ಆರೋಪಿ ಇಬ್ಬರ ಮೊಬೈಲ್ ಕೂಡ ಆನ್ ಇತ್ತು, ನೆಟ್ವರ್ಕ್ ಟ್ರೇಸ್ ಮಾಡಿದ ಪೊಲೀಸರು ಮಧ್ಯಾಹ್ನ 1 ಗಂಟೆಗೆ ಆರೋಪಿಗಳ ಪತ್ತೆ ಮಾಡಿ ಬಂಧಿಸಿದ್ದಾರೆ.

ಇಂಜಿನಿಯರ್ ಆಗಿದ್ದ ಮಾನಸ್ ಕಟ್ಟಡ ಕಾಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಕೆಲಸಕ್ಕೆಂದು ನಂದ ಬಳಿಯಿಂದ ಜೆಸಿಬಿ ಹಾಗೂ ಹಿಟಾಚಿ ಬಾಡಿಗೆಗೆ ಪಡೆದಿದ್ದ, ಕೆಲಸ ಮಾಡಿದ್ದ ನಂತರ ನಂದ 30 ಲಕ್ಷ ಬಾಡಿಗೆ ಕೇಳಿದ್ದ, ಬಾಡಿಗೆ ವಾಹನಗಳು ಸರಿಯಾಗಿ ಕೆಲಸ ಮಾಡದ ಹಿನ್ನಲೆ ಬೇರೆಯವರಿಂದ ಮಾಡಿಸಿದ್ದು ಹಣ ಕೊಡುವುದಿಲ್ಲವೆಂದು ಮಾನಸ್ ಹೇಳಿದ್ದ, ಈ ಹಿನ್ನೆಲೆ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡೊ ಪ್ಲಾನ್ ಮಾಡಿ ಕಿಡ್ನಾಪ್ ಮಾಡಿದ್ದಾಗಿ ನಂದ ಆ್ಯಂಡ್ ಗ್ಯಾಂಗ್ ಹೇಳಿದೆ.

Edited By : Nirmala Aralikatti
Kshetra Samachara

Kshetra Samachara

03/02/2022 01:42 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ