ಬೆಂಗಳೂರು: ನನ್ನ ವಿರುದ್ಧ ಕೆಲ ಪೊಲೀಸ್ ಅಧಿಕಾರಿಗಳು ಷಡ್ಯಂತ್ರ ಮಾಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿನ ರೌಡಿಶೀಟರ್ ಹಾಗೂ ಜೈಲು ಸಿಬ್ಬಂದಿ ಅವ್ಯವಹಾರದ ದೃಶ್ಯಗಳನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ಅವೆಲ್ಲ ಹಳೆಯ ವಿಡಿಯೋಗಳು. 2018ರಿಂದ ನಾನು ಇದುವರೆಗೂ ಪರಪ್ಪನ ಅಗ್ರಹಾರಕ್ಕೆ ಹೋಗಿಲ್ಲ ಎಂದುರೌಡಿ ಶೀಟರ್ ಜೆಸಿಬಿ ನಾರಾಯಣ ಹೇಳಿದ್ದಾನೆ.
ಈ ಬಗ್ಗೆ ವಿಡಿಯೋ ಮೂಲಕ ಉತ್ತರ ಕೊಟ್ಟಿರುವ ಜೆಸಿಬಿ ನಾರಾಯಣ, ಇಬ್ಬರು ಪೊಲೀಸ್ ಅಧಿಕಾರಿಗಳ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು. ನಾನು ಆ ಇಬ್ಬರು ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇನೆ. ಕೇಸ್ ವಾಪಸ್ ತೆಗದುಕೊಳ್ಳಿ ಎಂದು ಆ ಇಬ್ಬರು ಪೊಲೀಸ್ ಅಧಿಕಾರಿಗಳು ಒತ್ತಡ ಹಾಕಿಸುತ್ತಿದ್ದಾರೆ. ಸಮಾಜದಲ್ಲಿ ನಾನು ಎಲ್ಲಿ ಬೆಳೆಯುತ್ತೇನೆಂದು ರಾಜಕಾರಣಿ ಜೊತೆ ಕೆಲ ಪೊಲೀಸ್ ಅಧಿಕಾರಿಗಳು ಇದನ್ನು ಪದೇ ಪದೇ ಮಾಡುತ್ತಿದ್ದಾರೆ. ಹೀಗಾಗಿಯೇ ತಮ್ಮ ಇಲಾಖೆಯ ಗೌರವವನ್ನು ತಾವೇ ಹರಾಜು ಹಾಕುತ್ತಿದ್ದಾರೆ ಎಂದು ಜೆಸಿಬಿ ನಾರಾಯಣ ಹೇಳಿದ್ದಾರೆ.
2018ರಲ್ಲಿ ನಡೆದ ವಿಡಿಯೋ ರೆಕಾರ್ಡ್ ಆ ಇಬ್ಬರು ಪೊಲೀಸ್ ಅಧಿಕಾರಿಗಳೇ ಬಿಡುಗಡೆ ಮಾಡಿದ್ದಾರೆ. ಸರಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ ಎಂದು ನಾನು ಮನವಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡೋದಾಗಿ ಜೆಸಿಬಿ ನಾರಾಯಣ ಹೇಳಿದ್ದಾರೆ.
PublicNext
26/01/2022 01:24 pm