ಯಲಹಂಕ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು.ನಮ್ಮ ವ್ಯವಸ್ಥೆ ಎಷ್ಟರಮಟ್ಟಿಗೆ ಅವ್ಯವಸ್ಥೆಯ ಆಗರವಾಗಿದೆ ಎನ್ನುವುದಕ್ಕೆ ಈ ಕೇಸೆ ಸಾಕ್ಷಿ. ಓಲ್ಡ್ ಏಜ್ ಪೆನ್ಶನ್ ಮಾಡಿಸ್ತೀವಿ ಎಂದ ಪರಿಚಯಸ್ಥರು 1000 ರುಪಾಯಿ ನೀಡಿ, 5 ಕೋಟಿ ಆಸ್ತಿ GPA ಮಾಡಿಸಿ ಆಂಧ್ರದ ಭೂಮಾಫಿಯಾ ವಂಚಿಸಿದೆ.
ಬೆಂಗಳೂರು ಜಿಲ್ಲೆ ಯಲಹಂಕ ತಾಲೂಕು ಸಾದೇನಹಳ್ಳಿಯ 70 ವರ್ಷದ ಮುನಿಯಮ್ಮ ಕುಟುಂಬ ಇದೀಗ ದಿಕ್ಕು ಕಾಣದೆ ಕಂಗಾಲಾಗಿದೆ. ಇನ್ನೇನು ತವರಿನ ಜಮೀನು ಕೈಸೇರಿತು ಎನ್ನುವಷ್ಟರಲ್ಲಿ ಭೂಮಾಪಿಯಾ ಕಣ್ಣು ಈ ಅಜ್ಜಿ ಕುಟುಂಬದ ಮೇಲೆ ಬಿದ್ದಿದೆ.ಯಲಹಂಕ ತಾಲೂಕು ಅಗ್ರಹಾರ ಗ್ರಾಮದ ಸರ್ವೆ ನಂಬರ್ 5/1ರಲ್ಲಿ 11.8 ಗುಂಟೆ, ಸ.ನಂ.8 ರಲ್ಲಿ 3 ಗುಂಟೆ ಹೀಗೆ ಒಟ್ಟು 15 ಗುಂಟೆ ಜಾಗ ಮುನಿಯಮ್ಮನಿಗೆ ಸೇರ್ತದೆ ಎಂದು ಹೈಕೋರ್ಟ್ ಆದೇಶಿಸಿತ್ತು. ಆದರೆ ಆದೇಶದ ಪ್ರತಿ ಕೈ ಸೇರಿರಲಿಲ್ಲ. ಈ ವೇಳೆ ಈ ಮುನಿಯಮ್ಮನ ಜಮೀನಿನ ಮೇಲೆ ಆಂಧ್ರದ ಲಕ್ಷ್ಮೀನಾರಾಯಣ ರಾಜು ಗಾರಿ ಕೆಂಗಣ್ಣು ಬಿದ್ದಿದೆ.
ಈ ಮೊದಲೆ ಲಕ್ಷ್ಮೀನಾರಾಯಣರಾಜು ನಕಲಿ ಸಹಿ ಮಾಡಿ ಮುನಿಯಮ್ಮನ ಜಮೀನನ್ನ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಹೈಕೋರ್ಟ್ ನಲ್ಲಿ RFA-452/2006 ಸಂಖ್ಯೆ ಆರ್ಡರ್ ಆಗದ ಜಾಗವನ್ನು ಹೇಗೆ ಮಾರಲು ಸಾಧ್ಯ. ಜಮೀನನ್ನು ಯಾರಿಗೂ ಮಾರಿಲ್ಲ ಎಂದು ಮುನಿಯಮ್ಮ ಸಿಟಿಸಿವಿಲ್ ಹೈಕೋರ್ಟ್ ನಲ್ಲಿ O.S.No-7031/2019 ರಂತೆ ಲಕ್ಷ್ಮೀನಾರಾಯಣ ರಾಜು, ವಿರುದ್ಧದ ದಾವೆ ಹೂಡಿದ್ದು, ವಿಚಾರಣೆ ನಡೆಯುತ್ತಿದೆ.ಅಷ್ಟರಲ್ಲಿ ಅಜ್ಜಿಗೆ ದೊಡ್ಡ ಮೋಸ ಮಾಡಲಾಗಿದೆ.
ಇಲ್ಲಿಯ ಅಗ್ರಹಾರ ಗ್ರಾಮದ 5/1 ರ 11.8 ಗುಂಟೆ ಹಾಗು ಸ.ನಂ.8 ರ 3 ಗುಂಟೆ ಜಾಗವನ್ನ ಲಕ್ಷ್ಮೀನಾರಾಯಣರಾಜು GPA ಮಾಡಿಸಿ ಕೊಂಡಿದ್ದಾರೆ. ಸದ್ಯ ಮಾರುಕಟ್ಟೆಲಿ ಇದರ ಬೆಲೆ ಸುಮಾರು 5 ಕೊಟಿ ಆಗುತ್ತದೆ.
ಈ ಅಪಹರಣ ವಂಚನೆ ಬಗ್ಗೆ ಬೆಂಗಳೂರು ಗ್ರಾಮಾಂತರ S.P. ವಂಶೀಕೃಷ್ಣ ರವರಿಗೆ ದೂರು ನೀಡಿ, ರಾಜಾನುಕುಂಟೆ ಠಾಣೆಯಲ್ಲಿ FIR ಮಾಡಿಸಿದ್ದಾರೆ. ಆದರೆ ಪೊಲೀಸರು ಆರೋಪಿಗಳಿಗೆ ಅನುಕೂಲ ಅಗುವ ಸೆಕ್ಷನ್ಸ್ ಹಾಕಿ ಕೈತೊಳೆದುಕೊಂಡಿದ್ದಾರೆ..
PublicNext
25/01/2022 06:57 pm