ಬೆಂಗಳೂರು : ಅಟ್ಲಾಸ್ ಜ್ಯುವೆಲ್ಲರಿ ಇಂಡಿಯಾ ಲಿಮಿಟೆಡ್ ಮೇಲಿನ ಇ.ಡಿದಾಳಿ ನಡೆಸಿ 26.59 ಕೋಟಿ ಮೌಲ್ಯದ ಹೂಡಿಕೆ ಹಣ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದೆ.
ಕಳೆದ ವಾರ ದೇಶದ ಮುಂಬೈ,ಬೆಂಗಳೂರು ಮತ್ತು ದೆಹಲಿ ಸೇರಿ ಮೂರು ಕಡೆ ಇ.ಡಿ ದಾಳಿ ನಡೆಸಿತ್ತು. ದಾಳಿ ವೇಳೆ ಅಟ್ಲಾಸ್ ಜ್ಯುವೆಲ್ಲರಿ ಕಂಪನಿ Pmla ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರೋದು ಪತ್ತೆಯಾಗಿದೆ.
ಇದೇ ಕಾರಣಕ್ಕೆ ಕಂಪನಿಯಲ್ಲಿ ಹುಡಿಕೆಯಾಗಿದ್ದ ಹಣ ಹಾಗೂ ಚಿನ್ನಾಭರಣವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜೊತೆಗೆ ಕಂಪನಿ ನಿರ್ದೇಶಕರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಕುರಿತು ಇ.ಡಿ ಅಧಿಕೃತ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Kshetra Samachara
24/01/2022 10:37 pm