ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಲಾರಿಸ್ಟ್ಯಾಂಡ್ ಬಳಿ ಚಾಲಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಮಾಲು ಸಹಿತ ಮೂವರು ಆರೋಪಿಗಳನ್ನ ದಾಬಸ್ ಪೇಟೆ ಪೊಲೀಸ್ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನಿಲ್ 28, ಸರೋಜ್ ರಾವತ್ 23 ಮತ್ತು ಶಾಂತಿಲಾಲ್ ಮೀನಾ 32 ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 2 ಕೆ.ಜಿ ಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.
ದಾಬಸ್‌ಪೇಟೆಯ ಪಿಎಸ್ಐ ಮುರಳಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮೂವರನ್ನ ಬಂಧಿಸಿದ್ದಾರೆ. NDPS act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳನ್ನ ಸದ್ಯ ಜೈಲಿಗಟ್ಟಿದ್ದಾರೆ.
Kshetra Samachara
23/01/2022 08:25 pm