ಬೆಂಗಳೂರು:ಸ್ವಾಮಿಜಿ ಮೇಲೆ ಬಾಲಕಿ ಕಿಡ್ನ್ಯಾಪ್ ಮಾಡಿರೋ ಬಗ್ಗೆ ದೂರು ದಾಖಲಾಗಿದೆ. 16 ವರ್ಷದ ಬಾಲಕಿ ತಂದೆ ತಾಯಿ ಬಿಟ್ಟು ಆಶ್ರಮ ಸೇರಿದ ಕುರಿತು ಎಫ್‌ಐಆರ್ ದಾಖಲಾಗಿದೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗೂ ಕ್ಯಾರೆ ಅನ್ನದ ಮಗಳು ಆಶ್ರಮ ಸೇರೋಕೆ ಕಾರಣ, ಸ್ವಾಮೀಜಿ ಮೋಡಿಗೆ ಒಳಗಾಗಿದ್ಳಾ ಅನ್ನೋ ಅನುಮಾನ ವ್ಯಕ್ತವಾಗಿದೆ.
ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ನಡೆದ ಸ್ವಾಮೀಜಿಗಳ ಮೀಟಿಂಗ್ ನಲ್ಲಿ ಈ ಸ್ವಾಮೀಜಿ ಭಾಗಿಯಾಗಿದ್ದರು. ತನಿಖೆ ಕೈಗೊಂಡು ತಲಘಟ್ಟಪುರ ಪೊಲೀಸ್ರು ಬಾಲಕಿ ಪತ್ತೆ ಹಚ್ಚಿದ್ದಾರೆ. ಆತ್ಮಾನಂದ ಸ್ವಾಮೀಜಿ ಆಶ್ರಮದಲ್ಲೇ ಆಶ್ರಯ ಪಡೆದಿದ್ದ ಬಾಲಕಿಯನ್ನ ಪೊಲೀಸ್ರು ಪತ್ತೆ ಹಚ್ಚಿದ್ದಾರೆ.
ಈ ವೇಳೆ ಬಾಲಕಿಯ ತಾಯಿ ಮನೆಗೆ ಬಾ ಎಂದರೂ 16 ರ ಬಾಲಕಿ ಬರಲು ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆ ನ್ಯಾಯಾಲಯ ಸೂಚನೆಯಂತೆ ಚೈಲ್ಡ್ ವೆಲ್ಫೇರ್ ಗೆ ಬಾಲಕಿಯನ್ನುಪೊಲೀಸ್ರು ಬಿಟ್ಟಿದ್ದಾರೆ. ತಂದೆ ತಾಯಿ ಮನೆಯಲ್ಲಿ ಹೊಡೆಯುತ್ತಾರೆ ಅನ್ನೋ ಕಾರಣಕ್ಕೆ ಮನೆ ಬಿಟ್ಟು ಆಶ್ರಮ ಸೇರಿದ್ದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಸದ್ಯ ಮಗಳ ಮನವೊಲಿಸಿ ಪೋಷಕರು ಮನೆಗೆ ಬಾಲಕಿ ಕರೆತಂದಿದ್ದಾರೆ.
PublicNext
10/01/2022 10:03 am