ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಹುಡುಗನ್ನ ಹುಡುಕುತ್ತಿದ್ರೆ ಈ ಸ್ಟೋರಿ ನೋಡಿ... ನಕಲಿ ಖಾತೆ ತೆರೆದು ಯುವತಿಯರನ್ನ ಹೆಂಗ್ ಯಾಮಾರಿಸ್ತಿದ್ರು ಅನ್ನೋದು ಗೊತ್ತಾಗುತ್ತೆ!
ಪ್ರೊಫೈಲ್ ನಲ್ಲಿ ತಾನೊಬ್ಬ ಹೆಸ್ಕಾಂ ನೌಕರನೆಂದು ಬರೆದಿದ್ದ ಈತನಿಗೆ ತಂದೆ ಸಾವಿನ ಬಳಿಕ ಅನುಕಂಪದ ಆಧಾರದಲ್ಲಿ ಪವರ್ ಮನ್ ಕೆಲಸ ಸಿಕ್ಕಿತ್ತು. ಇದನ್ನೇ ಬಂಡವಾಳವಾಗಿಸಿ ಪರಿಚಯ ಆದವರಿಗೆ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಪುಂಗಿ ಬಿಟ್ಟು ಹಣ ಪೀಕ್ತಿದ್ದ. ಅಂದಹಾಗೆ ಇವ್ನ ಹೆಸ್ರು ಜೈ ಭೀಮ್‌ವಿಠ್ಠಲ್, ರಾಜ್ಯದ ಉದ್ದಗಲಕ್ಕೂ ಈತನ 420 ಜಾಲ ಹಬ್ಬಿದೆ!
ಸಾಲದ್ದಕ್ಕೆ 2013ರಲ್ಲಿ ಸುನಿತಾ ಎಂಬಾಕೆಯನ್ನ ಕೊಲೆ ಮಾಡಿ 2 ವರ್ಷ ಜೈಲಲ್ಲಿದ್ದ. ಜಾಮೀನಿನಿಂದ ಹೊರ ಬಂದವ ಫೇಕ್ ಐಡಿ ಕ್ರಿಯೇಟ್ ಮಾಡಿ ವಂಚಿಸಲು ಶುರು ಮಾಡಿದ. ಯುವತಿಯರಿಗೆ ಸರ್ಕಾರಿ ಕೆಲಸ ಕೊಡಿಸ್ತೀನಿ ಎಂದು ನಂಬಿಸುತ್ತಿದ್ದ. ಇದಕ್ಕಾಗಿ ಭೀಮ್ ಆಗಿದ್ದವ ರಾಜು ಆದ. ಶಿವಮೊಗ್ಗ, ಹಾವೇರಿ, ಮೈಸೂರು ಸಹಿತ ನಾನಾ ಭಾಗದ ಒಟ್ಟು 26 ಯುವತಿಯರಿಗೆ 22 ಲಕ್ಷ ರೂ. ವಂಚಿಸಿರೋದು ತನಿಖೆಯಿಂದ ಬಯಲಾಗಿದೆ! ಆಗ್ನೇಯ ವಿಭಾಗ ಸೆನ್ ಠಾಣೆ ಇನ್ಸ್ ಪೆಕ್ಟರ್ ಯೋಗೇಶ್ ಮತ್ತವರ ತಂಡ ಸಾಕಷ್ಟು ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿ ವಂಚಕನನ್ನು ಬಂಧಿಸಿ, 5 ಲಕ್ಷ ಮೌಲ್ಯದ ಕಾರು, ಬ್ಯಾಂಕ್ ಖಾತೆಯಲ್ಲಿದ್ದ 1.5 ಲಕ್ಷ ರೂ. ಫ್ರೀಝ್ ಮಾಡಿದ್ದಾರೆ.
PublicNext
09/01/2022 02:22 pm