ನೆಲಮಂಗಲ: ಕಾಡುಪ್ರಾಣಿ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ನೆಲಮಂಗಲ ವಲಯ ಅರಣ್ಯಾಧಿಕಾರಿ ಲಷ್ಕರ್ ನಾಯಕ್ ಹಾಗೂ ಉಪ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದ ಜಾಗೃತ ತನಿಖಾ ದಳ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಯಂಟಗಾನಹಳ್ಳಿ ಗ್ರಾಪಂ ಮಾಜಿ ಸದಸ್ಯ ಉಮೇಶ್ (45), ಹನುಮಂತಯ್ಯ (73) ಬಂಧಿತರು. ಈ ಆರೋಪಿಗಳು ಅರಣ್ಯದಲ್ಲಿ ಮೊಲ, ಕಾಡುಕೋಳಿ, ಕೊಕ್ಕರೆ ಸಹಿತ ಇತರ ಪ್ರಾಣಿಗಳ ಬೇಟೆಯಾಡಿ ಬಳಿಕ ತಮಟೆ ಹೊಡೆಯುತ್ತಾ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿ 75 ಯಂಟಗಾನಹಳ್ಳಿಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು!
ಅಲ್ಲದೆ, ಈ ಪ್ರಾಣಿಗಳನ್ನು ಹರಾಜು ಹಾಕಿದ ವೀಡಿಯೊ ವೈರಲ್ ಆಗಿದ್ದು, ಈ ಆಧಾರದ ಮೇಲೆ ತಲೆಮರೆಸಿಕೊಂಡ ಇತರ ಆರೋಪಿಗಳಿಗಾಗಿ ಪೊಲೀಸರು ತಲಾಶೆಯಲ್ಲಿದ್ದಾರೆ. ಬಂಧಿತ ಇಬ್ಬರನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
08/01/2022 10:04 pm