ಬೆಂಗಳೂರು: ಅನೈತಿಕ ಸಂಬಂಧದ ಹಿನ್ನಲೆ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಸರೋಡ್ ಜಂಕ್ಷನ್ ಬಳಿ ನಡೆದಿದೆ. ಅರ್ಚನಾರೆಡ್ಡಿ ಮೃತ ಮಹಿಳೆಯಾಗಿದ್ದಾಳೆ. ಆನೇಕಲ್ ತಾಲ್ಲೂಕಿನ ಜಿಗಣಿ ನಿವಾಸಿಯಾಗಿದ್ದ ಅರ್ಚನಾರೆಡ್ಡಿ
ಜಿಗಣಿಯಿಂದ ಹೆಚ್.ಎಸ್.ಆರ್ ಲೇ ಔಟ್ ಮನೆಗೆ ಹೋಗುವಾಗ ತಡರಾತ್ರಿ ಕಾರು ನಿಲ್ಲಿಸಿ ಹೆದ್ದಾರಿಯಲ್ಲೇ ಅಡ್ಡ ಲಾಂಗ್ ಬೀಸಿ ನವೀನ ಮತ್ತು ಸಂತೋಷ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ಸ್ ಸಿಟಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊದಲನೇ ಗಂಡನೊಂದಿಗೆ ಅರ್ಚನಾರೆಡ್ಡಿ ಡೈವೋರ್ಸ್ ಆಗಿ ಎರಡನೇ ಮದುವೆಯಾಗಿದ್ದರು.ಕೊಲೆ ಮಾಡಿರುವ ನವೀನ್ ಎರಡನೆಯ ಗಂಡನಾಗಿದ್ದಾನೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Kshetra Samachara
28/12/2021 12:01 pm