ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಹಿಳೆಗೆ ಮರ್ಮಾಂಗ ತೋರಿಸಿದ ಹೆಡ್ ಕಾನ್ಸ್ಟೇಬಲ್ ಮೇಲೆ ಎಫ್ ಐಆರ್ ದಾಖಲು

ಬೆಂಗಳೂರು : ಪೊಲೀಸರ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಅವರಿಂದ ತಪ್ಪುಗಳಾದಲ್ಲಿ ಶಿಕ್ಷಗೆ ಅವರು ಕೂಡಾ ಅರ್ಹರು ಎನ್ನುವುದಕ್ಕೆ ಬೆಂಗಳೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಮೇಲೆ ಎಫ್ ಐ ಆರ್ ದಾಖಲಾಗಿರುವುದೇ ಸಾಕ್ಷಿ.

ಹೌದು ಅಮೃತಹಳ್ಳಿ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಮೇಲೆ ಎಫ್ ಐಆರ್ ದಾಖಲಾಗಿದೆ. ನಿನ್ನೆ ತಡರಾತ್ರಿ ಯಲಹಂಕ ನ್ಯೂಟೌನ್ ನ ಹೌಸಿಂಗ್ ಬೋರ್ಡ್ ಬಳಿ ಮಹಿಳೆಗೆ ಮರ್ಮಾಂಗ ತೋರಿಸಿದ್ದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಬರ್ತ್ ಡೇ ಪಾರ್ಟಿ ಮುಗಿಸಿದ ಬಳಿಕ ಯಲಹಂಕ ನ್ಯೂಟೌನ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಮೂತ್ರವಿಸರ್ಜನೆಗೆ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬೀದಿ ಬದಿಯ ನಾಯಿಗಳಿಗೆ ಊಟ ನೀಡಲು ಬಂದಿದ್ದರು. ಈ ಸಮಯಲ್ಲಿ ಚಂದ್ರಶೇಖರ್ ಮಹಿಳೆಗೆ ಮರ್ಮಾಂಗ ತೋರಿಸಿ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ.

ಈ ಕುರಿತು ಯಲಹಂಕ ನ್ಯೂಟೌನ್ ಠಾಣೆಯಲ್ಲಿ IPC ಸೆಕ್ಷನ್ 354(a) ಹಾಗೂ 509 ಅಡಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

21/12/2021 10:00 pm

Cinque Terre

658

Cinque Terre

0

ಸಂಬಂಧಿತ ಸುದ್ದಿ