ಬೆಂಗಳೂರು: ಎಸಿಬಿ ಬಲೆಗೆ ಮಲ್ಲೇಶ್ವರ ಜಿಲ್ಲಾ ಸಹಕಾರ ಮಂಡಳಿ ಅಧೀಕ್ಷಕ ಸೋಮಶೇಖರಯ್ಯ ಬಿದ್ದಿದ್ದಾನೆ.ಈತ ವಿದ್ಯುತ್ ಗುತ್ತಿಗೆದಾರ ಸಂಘದ ಚುನಾವಣಾ ಪ್ರಕ್ರಿಯೆ ನಡೆಸಲು ಒಂದು ಲಕ್ಷ ಲಂಚದ ಹಣ ಬೇಡಿಕೆ ಇಟ್ಟಿದ್ದ . ಕೋವಿಡ್ ನಿಂದಾಗಿ ಈ ಚುನಾವಣೆ ಮುಂದೂಡಲ್ಪಟ್ಟಿತ್ತು. ಇದೀಗ ಒಂದು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಕನಕಪುರದ ವಾಜರಳ್ಳಿ ನಿವಾಸಿಗೆ ಲಂಚದ ಬೇಡಿಕೆ ಇಟ್ಟಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
30/11/2021 08:24 pm