ಬೆಂಗಳೂರು : ಬೈಕ್ ಗಳನ್ನ ಕಳ್ಳತನ ಮಾಡುತ್ತಿದ್ದ ಓರ್ವ ಬಾಲಪರಾಧಿಯನ್ನು ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶ ಕಂಡಿದ್ದಾರೆ. ಇನ್ನು ಬಂಧಿತನಿಂದ 3.90 ಲಕ್ಷ ಬೆಲೆಬಾಳುವ 7 ಬೈಕ್ ಗಳು ವಶ ಪಡಿಸಿಕೊಳ್ಳಲಾಗಿದೆ.
ಮನೆ ಮುಂದೆ ಪಾರ್ಕಿಂಗ್ ಮಾಡಿದ್ದ ಬೈಕ್ ಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಆರ್,ಆರ್ ನಗರ, ಚೆನ್ನಮ್ಮನ ಕೆರೆ ಅಚ್ಚಕಟ್ಟು, ಪುಟ್ಟೇನಹಳ್ಳಿ, ಕೆ.ಎಸ್ ಲೇಔಟ್ ಸೇರಿದಂತೆ 7 ಬೈಕ್ ಕಳ್ಳತನ ಹಾಗೂ ಒಂದು ಮೊಬೈಲ್ ಕಳ್ಳತನ ಪ್ರಕರಣ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
Kshetra Samachara
27/11/2021 02:28 pm