ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೆಲ್ ಎಜುಕೆಟೇಡ್ ಖದೀಮರೀಗ ಪೊಲೀಸರ ಅತಿಥಿ

ಬೆಂಗಳೂರು: ಬೀಗ ಹಾಕಿದ್ದ ಕಾರ್ಮಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಎಸಗುತ್ತಿದ್ದ ಅಸ್ಸಾಂ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ‌ ಪೊಲೀಸರು ಯಶಸ್ವಿಯಾಗಿದ್ದಾರೆ. ಶೀಟ್ ಮನೆಗಳನ್ನ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಈ ಖದೀಮರು.ಬಂಧಿತರಿಂದ 2.20 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ಒಂದು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

ಇನ್ನು ವೆಲ್ ಎಜುಕೇಟಡ್ ಹಾಗೂ ಅಂತರರಾಜ್ಯ ಬೈಕ್ ಕಳ್ಳ ಕೂಡ ಪೊಲೀಸರ ಅತಿಥಿಯಾಗಿದ್ದಾರೆ.ಉದ್ಯೋಗ ಸಿಗದಿದ್ದಕ್ಕೆ ಈ ಕೆಲಸಕ್ಕೆ ಕೈ ಹಾಕಿದ್ನಂತೆ.ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಮಾಡಿಕೊಂಡಿದ್ದ ಆರೋಪಿ ಇಂಜಿನಿಯರ್ ಮೈಂಡ್ ಉಪಯೋಗಿಸಿ ಬೈಕ್ ಗಳ ಕಳವು ಮಾಡುತ್ತಿದ್ದ.

ಆಂಧ್ರ ಹಾಗೂ ಕರ್ನಾಟಕದಲ್ಲಿ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಈತ ಬೆಂಗಳೂರಿನಲ್ಲಿ ಕಳವು ಮಾಡಿದ ಬೈಕ್ ಗಳನ್ನು ಆಂಧ್ರದಲ್ಲಿ, ಆಂಧ್ರದಲ್ಲಿ ಕಳವು ಮಾಡುತ್ತಿದ್ದ ಬೈಕ್ ಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ .

ಬಂಧಿತನಿಂದ 5ರಾಯಲ್ ಎನ್ ಫೀಲ್ಡ್ 4ಪಲ್ಸರ್ 1ಯಮಹಾ ಒಟ್ಟು ಹತ್ತು ಬೈಕ್, 15ಲಕ್ಷ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ .ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

25/11/2021 11:36 am

Cinque Terre

900

Cinque Terre

0

ಸಂಬಂಧಿತ ಸುದ್ದಿ