ಬೆಂಗಳೂರು; ನಕಲಿ ಚಿನ್ನ ತೋರಿಸಿ ನಗರ್ತಪೇಟೆಯ ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ವಂಚಸಿದ ಘಟನೆ ನಗರದ ಎಸ್ ಜೆ ಪಾರ್ಕ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಇಲಿಯಾಸ್ ಬಂಧಿತ ವ್ಯಕ್ತಿ,ಈತ ಕೆಲ ತಿಂಗಳಿಂದ ಜ್ಯುವೆಲ್ಲರಿ ಶಾಪ್ ಗೆ ನಿರಂತರವಾಗಿ ಚಿನ್ನದ ಗಟ್ಟಿಯನ್ನು ನೀಡುತ್ತಿದ್ದ.
ಜುಲೈ 20 ರಂದು 3 ಕೆಜಿ ಚಿನ್ನದ ಬಿಸ್ಕೆಟ್ ತಂದು ಕೊಟ್ಟಿದ್ದ. 3 ಕೆಜಿಗೆ 1.30 ಕೋಟಿ ಹಣ ನೀಡುವಂತೆ ಆರೋಪಿ ಇಲಿಯಾಸ್ ಕೇಳಿದ್ದ.ಅದರನ್ವಯ ಜ್ಯುವೆಲ್ಲರಿ ಮಾಲಿಕ 1.30 ಕೋಟಿ ರೂ ಹಣವನ್ನು ನೀಡಿದ್ದ. ಆದರೆ ಚಿನ್ನ ಖರೀದಿಸಿ ಮೂರು ತಿಂಗಳ ಬಳಿಕ ಅದು ನಕಲಿ ಚಿನ್ನ ಎಂಬುದು ಪತ್ತೆಯಾಗಿದೆ.
ಈ ಸಂಬಂಧ ಎಸ್ ಜೆ ಪಾರ್ಕ್ ಪೊಲೀಸರಿಗೆ ಜ್ಯುವೆಲ್ಲರಿ ಮಾಲೀಕ ರಾಹುಲ್ ದೂರು ನೀಡಿದ್ದರು.
ದೂರಿನನ್ವಯ ಆರೋಪಿ ಇಲಿಯಾಸ್ ಅನ್ನು ಗುಜರಾತ್ ನ ಬರೋಡಾದಿಂದ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.ಹಾಗೂ ಆರೋಪಿ ಬಂದ ಹಣದಲ್ಲಿ ಜೂಜಾಟ ಆಡಿ ಕಳೆದುಕೊಂಡಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
Kshetra Samachara
16/10/2021 04:15 pm