ಬೆಂಗಳೂರು : ಇಂದು ಬೆಳಿಗ್ಗೆಯಿಂದ ಬೆಂಗಳೂರಿನ ವಿವಿಧ 50 ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿದೆ. 300ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದು ಸದ್ಯ ಮಾಜಿ ಸಿಎಂ ಬಿಎಸ್ ವೈ ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಭಾಷ್ಯಂ ಸರ್ಕಲ್ ನಲ್ಲಿರುವ ಉಮೇಶ್ ಮನೆ, ಕಚೇರಿ ಸೇರಿ 4 ಕಡೆಗಳಲ್ಲಿ ದಾಳಿ ನಡೆದಿದೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ವಿಜಯೇಂದ್ರಗೆ ಪಿಎ ರೀತಿ ಉಮೇಶ್ ಕೆಲಸ ಮಾಡುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದ ಉಮೇಶ್ ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಡೆಪ್ಯೂಟೇಶನ್ ಮೇಲೆ ಹಲವು ವರ್ಷಗಳಿಂದ ಬಿಎಸ್ ವೈ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು. ಹಾಗಾಗಿ ಸಾರಿಗೆ ಇಲಾಖೆಗೆ ಕೆಲಸಕ್ಕೆ ಉಮೇಶ್ ಬೈ..ಬೈ ಹೇಳಿ ಯಡಿಯೂರಪ್ಪನವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಯಡಿಯೂರಪ್ಪನವರ ಮನೆಯಲ್ಲಿರುತ್ತಿದ್ದರು.
ಸ್ವಂತ ಮನೆಯಿದ್ರು ಸುಮಾರು 15 ವರ್ಷದಿಂದಲೂ ಭಾಷ್ಯಂ ಸರ್ಕಲ್ ನಲ್ಲಿ ಬಾಡಿಗೆ ಮನೆವೊಂದರಲ್ಲಿ ಉಮೇಶ್ ವಾಸವಿದ್ದರು ಸದ್ಯ ಬಾಡಿಗೆ ಮನೆಯಲ್ಲಿಯೇ 10 ಜನ ಐಟಿ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.
Kshetra Samachara
07/10/2021 12:23 pm