ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಿಯೋಕೆ ನೀರು ಕೇಳಿದ್ದೆ ತಪ್ಪಾಯ್ತಾ.? ನೀರು ಕೇಳಿದವನ ಎದೆಗೆ ಚಾಕು ಇರಿದು ಕೊಂದ ಪಾಪಿ

ಬೆಂಗಳೂರು: ಹಸಿದಾಗ ಅನ್ನ ಹಾಕ್ಬೇಕು, ಬಾಯಾರಿದಾಗ ಕುಡಿಯೋಕೆ ನೀರು ಕೊಡಬೇಕು. ಇದು ಈ ಮಣ್ಣಿಗಿರೋ ಗುಣ. ಹೀಗ್ ಅನ್ಕೊಂಡೋ ಏನೋ ಈ ಆಟೋ ಡ್ರೈವರ್ ಇನ್ನೊಬ್ಬ ಆಟೋ ಡ್ರೈವರ್ ಹತ್ರ ನೀರು ಕೇಳಿದ್ದಾನೆ. ಇಷ್ಟಕ್ಕೆ ಚಾಕು ಇರಿದು ಕೊಲೆ ಮಾಡಿ ಬಿಟ್ಟಿದ್ದಾನೆ.

ಆಟೋ ಡ್ರೈವರ್‌ಗಳು ಒಗ್ಗಾಟ್ಟಿಗಿರ್ತಾರೆ ಅಂತಾರೆ. ಆದ್ರೆ ಇಲ್ಲಿ ಆಟೋ ಡ್ರೈವರೇ ಇನ್ನೊಬ್ಬ ಡ್ರೈವರ್‌ಗೆ ಶತ್ರು ಆಗ್ಬಿಟ್ಟಿದ್ದಾನೆ. ಇಲ್ಲಿ ಎಲ್ಲಾ ನಮ್ಮೋರ ತರಾನೇ ಕಾಣ್ತಾರೆ. ಆದ್ರೇ ನಮ್ಮೋರಲ್ಲ. ನೀವೇನಾದ್ರು ಇವ್ರು ನಮ್ಮವರ ತರಾನೇ ಕಾಣ್ತಾವ್ರಲ್ಲ ಅಂತ ಏನಾದ್ರೂ ಹೆಲ್ಪ್ ಕೇಳಿದ್ರೆ ಅಷ್ಟೇ ನಿಮ್ ಕಥೆ. ಇಲ್ಲಿ ಆಗಿದ್ದು ಕೂಡ ಅದೇ, ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ ಜಾಲಹಳ್ಳಿ ಕ್ರಾಸ್ ನ ಬಳಿ ಸಿದ್ದಿಕ್ ಎಂಬ 25 ವರ್ಷದ ಆಟೋ ಡ್ರೈವರ್ ಗಾಡಿ ಓಡ್ಸಿ ಸ್ವಲ್ಪ ಸುಸ್ತಾಗಿದ್ರಿಂದ ರಾತ್ರಿ ಸರಿ ಸುಮಾರು 11.30ಕ್ಕೆ ಟೀ ಕುಡಿಯೋಣ ಅಂತ ಟೀ ಶಾಪ್ ಹತ್ರ ಆಟೋ ಹಾಕಿದ್ದಾನೆ. ಆಟೋ ಇಳ್ದು ಅಲ್ಲೇ ಇದ್ದ ಇನ್ನೊಬ್ಬ ಅಜಯ್ ಸಿಂಗ್ ಅನ್ನೋ ಆಟೋ ಡ್ರೈವರ್ ನೋಡಿದ್ದಾನೆ. ನಮ್ಮ ಆಟೋ ಡ್ರೈವರೇ ಅಲ್ವ? ಅಂತ ಸಿದ್ದಿಕ್ ಮಗಾ ಸ್ವಲ್ಪ ನೀರು ಕೊಡೋ ಅಂತ ಅಜಯ್‌ಗೆ ಕೇಳಿದ್ದಾನೆ. ಅಷ್ಟೇ ಅಜಯ್ ಕೋಪಗೊಂಡು ನನ್ನೇ ಮಗಾ ನೀರು ಕೊಡೊ ಅಂತಿಯಾ ಅಂತ ಬೈದಿದ್ದಾನೆ. ಇದ್ಕೇ ಸಿದ್ದಿಕ್ ಅಲಾ ಗುರು ಜಸ್ಟ್ ನೀರು ತಾನೇ ಕೇಳಿದ್ದು ಅಂತ ಅಜಯ್ ಮಾತಿಗೆ ಎದುರು ಮಾತು ಕೊಟ್ಟಿದ್ದಾನೆ.

ಇವ್ರಿಬ್ರು ಮಾತಿನ ಚಕಮಕಿ ನಡೆದು ಇದ್ಕಿದಂಗೆ ಜೋರಾಗಿ ಮಾತರು ತಾರಕಕ್ಕೇರಿ ಅಜಯ್ ತನ್ನ ಆಟೋದಲ್ಲಿದ್ದ ಚಾಕು ತಂದು ಸಿದ್ದಿಕ್ ಎದೆಗೆ ಚುಚ್ಬಿಟ್ಟಿದ್ದಾನೆ. ತಕ್ಷಣ ರಕ್ತಸ್ತ್ರಾವ ಆಗಿ ಒದ್ದಾಡ್ತಿದ್ದ ಸಿದ್ದಿಕ್ ನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೇ ಸಿದ್ದಿಕ್ ಗೆ ಗಂಭೀರ ಗಾಯ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿ ಆಗ್ದೇ ಸಿದ್ದಿಕ್ ಕೊನೆಯುಸಿರೆಳಿದ್ದಾನೆ.

‌ಸದ್ಯಕ್ಕೆ ಸಿದ್ದಿಕ್ ನನ್ನ ಕೊಲೆಗೈದ ಅಜಯ್ ಪೀಣ್ಯ ಪೊಲೀಸ್ರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಕೋಪದ ಕೈಗೆ ಬುದ್ದಿ ಕೊಟ್ಟು ಒಬ್ಬ ಜೈಲು ಸೇರಿದ್ರೆ ಮತ್ತೊಬ್ಬ ಮಸಣ ಸೇರಿದ್ದಾನೆ.

Edited By : Nagaraj Tulugeri
PublicNext

PublicNext

12/09/2022 06:33 pm

Cinque Terre

22.96 K

Cinque Terre

2

ಸಂಬಂಧಿತ ಸುದ್ದಿ