ಬೆಂಗಳೂರು: ಬೆಂಗಳೂರು ಕೋಲಾರ ಹೆದ್ದಾರಿಯಲ್ಲಿ ಲಾರಿ ಮತ್ತು ಗೂಡ್ಸ್ ವಾಹನಗಳನ್ನು ಹಿಡಿದು ಲಂಚ ಪಡೆಯುತ್ತಿದ್ದ ಹೋಂ ಗಾರ್ಡ್ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬೆಂಗಳೂರು ಕೋಲಾರ ರಸ್ತೆಯ ಹೊಸಕೋಟೆ ಟೋಲ್ ಗೇಟ್ ಚೆಕ್‌ಪೋಸ್ಟ್ ಬಳಿ ಲಾರಿ ಮತ್ತು ಗೂಡ್ಸ್ ವಾಹನ ಹಿಡಿದು ಲಂಚ ಪಡೆಯುವ ವೇಳೆ ಪಕ್ಷದ ಕಾರ್ಯಕರ್ತರು ಹೋಂ ಗಾರ್ಡ್ ಲಂಚ ಪಡೆಯುವ ವಿಡಿಯೋ ಮಾಡಿದ್ದಾರೆ. ವೇಳೆ ಕಾರ್ಯಕರ್ತರು ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡುವುದನ್ನು ಕಂಡು ಹೋಂ ಗಾರ್ಡ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಹೋಂ ಗಾರ್ಡ್ ಅಮರೇಶ್ ಗೂಡ್ಸ್ ವಾಹನ ಮತ್ತು ಲಾರಿಗಳನ್ನು ಸುಖಾಸುಮ್ಮನೆ ಹಿಡಿದು ವಾಹನ ಸವಾರರಿಂದ 200 ರೂಪಾಯಿ ಲಂಚ ಪಡೆಯುವ ವೇಳೆ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರು ಹಿಡಿಯಲು ಮುಂದಾಗಿದ್ದಾರೆ. ಕಾರ್ಯಕರ್ತರನ್ನು ನೋಡುತ್ತಿದ್ದಂತೆ ಅಮರೇಶ ಸ್ಥಳದಿಂದ ಓಡಿ ಹೋಗಿದ್ದಾನೆ. ಹೋಂ ಗಾರ್ಡ್‌ಗಳು ದಿನನಿತ್ಯ ಈ ರಸ್ತೆಯ ಮಾರ್ಗವಾಗಿ ಓಡಾಡುವ ಗೂಡ್ಸ್ ವಾಹನ ಮತ್ತು ಲಾರಿಗಳನ್ನು ಸುಖಾಸುಮ್ಮನೆ ಹಿಡಿದು ವಾಹನವನ್ನು ಬಿಡಲು 200 ರೂಪಾಯಿ ಲಂಚ ಪಡೆಯುತ್ತಾರೆ ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
24/08/2022 10:20 am