ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಸ್ಥಾನದಲ್ಲಿ ಹತ್ಯೆ, ಲಕ್ನೋದಲ್ಲಿ ಚಿತ್ರಹಿಂಸೆ; ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಇಂದು ಪಂಜಿನ ಮೆರವಣಿಗೆ

ಆನೇಕಲ್: ರಾಜಸ್ಥಾನದಲ್ಲಿ ಕುಡಿಯುವ ನೀರು ಮುಟ್ಟಿದ ಕಾರಣಕ್ಕೆ 9 ವರ್ಷ ವಯಸ್ಸಿನ ದಲಿತ ಬಾಲಕನನ್ನು ಹೊಡೆದು ಕೊಲೆ ಮಾಡಿರುವ ಹಾಗೂ ಲಕ್ನೋದಲ್ಲಿ 18 ಗಂಟೆಗಳ ಕಾಲ ದಲಿತ ವಿದ್ಯಾರ್ಥಿಯನ್ನು ಬಂಧಿಸಿ ಚಿತ್ರಹಿಂಸೆ ನೀಡಿರುವುದನ್ನು ಖಂಡಿಸಿ ಇಂದು (ಶುಕ್ರವಾರ) ಸಂಜೆ ಆನೇಕಲ್ ಹೃದಯ ಭಾಗದಲ್ಲಿ ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆ ಒಕ್ಕೂಟ ಬೃಹತ್ ಪ್ರತಿಭಟನೆ, ಪಂಜಿನ ಮೆರವಣಿಗೆಯನ್ನು ಹಮ್ಮಿಕೊಂಡಿದೆ.

ಈ ಪ್ರತಿಭಟನೆಯ ಪಂಜಿನ ಮೆರವಣಿಗೆ ಆನೇಕಲ್ ಅಂಬೇಡ್ಕರ್ ಪುತ್ಲಳಿಯಿಂದ ಹಿಡಿದು ಆನೇಕಲ್ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂಬಂಧ ಪ್ರಗತಿಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ, ಪ್ರತಿಯೊಬ್ಬ ಮಗುವಿಗೂ ಆಕಾಶವನ್ನು ನೋಡಬೇಕು, ಮುಟ್ಟಿಬೇಕು ಎಂಬ ಆಸೆ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ಮಡಿಕೆ ಮುಟ್ಟಿದರೆ ಕೊಲೆ ಮಾಡುವಂತ ದೇಶ ಭಾರತದಲ್ಲಿ ಮಾತ್ರ ಸಾಧ್ಯ. ಅಂತಹ ಕೊಲೆಗಡುಕರಿಗೆ ತಕ್ಕ ಶಿಕ್ಷೆ ಆಗಬೇಕು. ಮಕ್ಕಳ ದೌರ್ಜನ್ಯ ಕಾನೂನು ಅಡಿಯಲ್ಲಿ ಆತನಿಗೆ ಶಿಕ್ಷೆ ಆಗಬೇಕು. ಇಂತಹ ಅಮಾನವೀಯ ಘಟನೆಗಳು ನಡೆದರೂ ಸಹ ಅಲ್ಲಿನ ಸರ್ಕಾರಗಳು ಕಣ್ಮುಚ್ಚಿ ಕುಳಿತಿರೋದು ವಿಪರ್ಯಾಸ. ಸಂವಿಧಾನದಿಂದ ಪ್ರತಿಯೊಬ್ಬ ಮನುಷ್ಯನನ್ನು ಗೌರವದಿಂದ ಕಾಣಬೇಕು ಅನ್ನೋದು ಇಂತಹ ಹೇಯ ಕೃತ್ಯಗಳನ್ನು ಎಸುಗುವ ಧಿಕ್ಕಾರವಿರಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಕೀಲ ಆನಂದ್ ಚಕ್ರವರ್ತಿ ಮಾತನಾಡಿ, ಶಿಕ್ಷಕನೇ ತನ್ನ ವಿದ್ಯಾರ್ಥಿಯನ್ನ ಕೊಲೆ ಮಾಡುವಂತಹ ಮಟ್ಟಿಗೆ ಇಳಿದಿದ್ದು ದುರಂತ ಎಂದು ಹೇಳಿದರು.

Edited By :
PublicNext

PublicNext

19/08/2022 09:59 am

Cinque Terre

32.08 K

Cinque Terre

0

ಸಂಬಂಧಿತ ಸುದ್ದಿ