ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಯಂಬ್ರಹಳ್ಳಿಯಲ್ಲಿ ಪ್ರೇಮಿಗಳಾದ ಶಿವಕುಮಾರ್ ಹಾಗೂ ಜಯಶ್ರೀ ಸ್ವಾತಂತ್ರ್ಯೋತ್ಸವ ದಿನದಂದು ಮದುವೆಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿ ಕಡೆಯ 30ಕ್ಕೂ ಹೆಚ್ಚು ಜನರ ಗುಂಪು ಧಾವಿಸಿ ಬಂದು ಯುವಕನ ಮನೆ ಮೇಲೆ ದಾಳಿ ನಡೆಸಿ, ಬಾಗಿಲು-ಕಿಟಕಿ, ಹೂ ಗಿಡದ ಕುಂಡ ಹಾಗೂ ಮನೆ ವಸ್ತುಗಳನ್ನೆಲ್ಲ ಧ್ವಂಸಗೊಳಿಸಿದ್ದಾರೆ.
ಯಂಬ್ರಹಳ್ಳಿ ಗ್ರಾಮದ ಶಿವಕುಮಾರ್ ಅದೇ ಗ್ರಾಮದ ಜಯಶ್ರೀಯನ್ನು 6 ವರ್ಷಗಳಿಂದ ಪ್ರೀತಿಸ್ತಿದ್ದ. ಈ ನಡುವೆ ಜಯಶ್ರೀ ಪೋಷಕರು ಬೇರೆ ಕಡೆ ಮದುವೆ ಮಾಡಲು ಪ್ಲಾನ್ ಮಾಡಿದ್ದರು. ಇದರಿಂದ ಜಯಶ್ರೀ ಮತ್ತು ಶಿವಕುಮಾರ್ ಓಡಿ ಹೋಗಿ ಮದುವೆಯಾಗಿದ್ರು. ವೇಣುಗೋಪಾಲ, ಬೈರೇಗೌಡ, ರಂಗಪ್ಪ, ಯುವತಿ ತಂದೆ ಮುನಿರಾಜು ಸಹಿತ 30 ಮಂದಿಯ ಗುಂಪು ದಾಳಿ ಮಾಡಿ, ಶಿವಕುಮಾರ್ ತಂದೆ-ತಾಯಿ ಹಾಗೂ ಮನೆಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.
ಜಯಶ್ರೀ ವಿಜಯಪುರ ಪೊಲೀಸ್ ಠಾಣೆಗೆ ಪತ್ರ ಬರೆದು, ರಕ್ಷಣೆ ಕೋರಿದ್ದಳು. ಮನೆ ಧ್ವಂಸ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವಜೋಡಿಗೆ ಪೊಲೀಸರಿಂದ ರಕ್ಷಣೆ ಸಿಗುತ್ತಾ? ಎನ್ನುವುದೇ ಸದ್ಯದ ಕುತೂಹಲ.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ
PublicNext
19/08/2022 09:03 am