ಬೆಂಗಳೂರು: ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ನಡತೆ ತೋರುವ ಕೈದಿಗಳನ್ನ ಬಿಡುಗಡೆ ಮಾಡುವ ವ್ಯವಸ್ಥೆಯನ್ನ ಕಾರಗೃಹ ಇಲಾಖೆ ಈ ವರ್ಷವೂ ಮುಂದುವರೆಸಿದೆ. ಈ ಬಾರಿ ಇಬ್ಬರು ಮಹಿಳಾ ಕೈದಿಗಳು ಸೇರಿ ಬ 81 ಮಂದಿ ಜೈಲು ಹಕ್ಕಿಗಳಿಗೆ ಮುಕ್ತಿ ಕೊಡಿಸಿದೆ.
ವಿವಿಧ ಅಪರಾಧವೆಸಗಿ ಶಿಕ್ಷಾ ಬಂಧಿಯಾಗಿರುವ ಕೈದಿಗಳನ್ನು ಸನ್ನಡತೆ ತೋರುವ ಬಂಧಿಗಳಿಗೆ ಬಿಡುಗಡೆ ಮಾಡುವುದು ಅಲಿಖಿತ ನಿಯಮ. ಮಾಡಿದ್ದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಬಿಡುಗಡೆ ಬಳಿಕ ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದು ಬಿಡುಗಡೆ ಹಿಂದಿನ ಉದ್ದೇಶವಾಗಿದೆ ಅದರಂತೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ 14 ಮಂದಿ ಬೆಳಗಾವಿ 3, ಬಳ್ಳಾರಿ 8, ವಿಜಯಪುರ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9 ಹಾಗೂ ಶಿವಮೊಗ್ಗ ಮಹಿಳಾ ಜೈಲಿನಲ್ಲಿ ಓರ್ವ ಮಹಿಳಾ ಸಜಾಬಂಧಿಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
Kshetra Samachara
15/08/2022 10:12 pm