ಬೆಂಗಳೂರು: ಒಂಟಿಯಾಗಿ ವಾಸವಿದ್ದ ವೃದ್ಧೆಯನ್ನ ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಫಸ್ಟ್ ಸೆಕ್ಟರ್‌ನಲ್ಲಿ ನಡೆದಿದೆ. ಇಂದು ಬೆಳಗ್ಗೆ ಅದೇ ಮನೆಯಲ್ಲಿ ಬಾಡಿಗೆಗೆ ಇದ್ದ ಹುಡುಗರು ನೋಡಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಎಚ್ಎಸ್ಆರ್ ಲೇಔಟ್ ಪೊಲೀಸರು ಮನೆಯಲ್ಲಿ ಕೊಲೆಯಾಗಿದ್ದ ವೃದ್ಧೆಯ ಮೃತದೇಹವನ್ನು ಪೋಸ್ಟ್‌ಮಾರ್ಟಮ್‌ಗೆ ಕಳಿಸಲಾಗಿದೆ. ಕೊಲೆಯಾಗಿರುವ ವೃದ್ಧೆಗೆ ಇಬ್ಬರು ಮಕ್ಕಳಿದ್ದು, ಅವರು ವಿದೇಶದಲ್ಲಿದ್ದಾರೆ. ಇನ್ನು ಪತಿ ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಗಿನಿಂದ ಇವರೊಬ್ಬರೇ ಎಚ್ಎಸ್ಆರ್ ಲೇಔಟ್‌ನ ಮನೆಯಲ್ಲಿ ವಾಸವಾಗಿದ್ದರು.
ವೃದ್ಧೆ ಆಗಾಗ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಕರೆ ಮಾಡಿ, 'ನನ್ನನ್ನು ಯಾರೋ ಕೊಲೆ ಮಾಡಲು ಮನೆಗೆ ಬಂದಿದ್ದಾರೆ' ಎಂದು ದೂರಿದ್ದರು. ಕೂಡಲೇ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಸಿಬ್ಬಂದಿ ಆಗಾಗ ಮನೆಗೆ ಬಂದು ಭೇಟಿ ನೀಡಿ ಪರಿಶೀಲನೆ ಮಾಡಿ ಅವರಿಗೆ ಧೈರ್ಯ ತುಂಬಿ ಹೋಗುತ್ತಿದ್ದರು. ಆದರೆ ಮಹಿಳೆಯ ದುರಾದೃಷ್ಟಕ್ಕೆ ಶುಕ್ರವಾರ ರಾತ್ರಿ ಕೊಲೆ ಆಗಿಹೋಗಿದ್ದಾರೆ.
ವೃದ್ಧೆ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಹಂತಕರನ್ನು ಪೊಲೀಸರು ಈಗ ನಾಲ್ಕು ತಂಡಗಳು ಹುಡುಕಾಡುತ್ತಿದ್ದಾರೆ.
ವೃದ್ಧೆಯ ಕೊಲೆ ಕಂಡು ಅಕ್ಕಪಕ್ಕದ ನಿವಾಸಿಗಳು ಭಯಭೀತರಾಗಿದ್ದು ಕೂಡಲೇ ಹಂತಕರನ್ನು ಬಂಧಿಸಬೇಕೆಂದು ಪೊಲೀಸರಿಗೆ ಆಗ್ರಹಿಸುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
14/08/2022 09:33 am