ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಅಮೃತ್ ಪೌಲ್ ಗೆ ಜಮೀನು ಕೊಡಿಸಿರುವುದು ನಿಜ" ; ಉದ್ಯಮಿ ಹುಸ್ಕೂರ್ ಆನಂದ್

ದೊಡ್ಡಬಳ್ಳಾಪುರ: ಪಿಎಸ್ಐ ನೇಮಕಾತಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಬಂಧಿತ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಗೆ ಜಮೀನು ಕೊಡಿಸಿರುವುದು ನಿಜ. ಆದರೆ, ಯಾವುದೇ ವ್ಯವಹಾರ ಇಟ್ಟುಕೊಂಡಿಲ್ಲ ಎಂದು ನಂದನವನ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಹುಸ್ಕೂರು ಆನಂದ್ ಹೇಳಿದರು.

PSI ನೇಮಕಾತಿ ಹಗರಣ ಹಿನ್ನಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನ ಬಂಧಿಸಲಾಗಿದೆ. ಅವರೊಂದಿಗೆ ಪೋನ್ ಸಂಭಾಷಣೆ ನಡೆಸಿದ ದೊಡ್ಡಬಳ್ಳಾಪುರದ ಉದ್ಯಮಿ ಹುಸ್ಕೂರ್ ಆನಂದ್ ರವರ ಕಚೇರಿ ಮತ್ತು ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು.

ಇದೇ ವಿಚಾರಕ್ಕೆ ಸಂಬಂಧಿಸಿ ಹುಸ್ಕೂರ್ ಆನಂದ್ ಪತ್ರಿಕಾಗೋಷ್ಠಿ ಕರೆದು ಮಾತನಾಡಿ, 2016-17 ರಲ್ಲಿ ತಾಲೂಕಿನ ರಾಮೇಶ್ವರ ಹಾಗೂ ಪಿಂಡಕೂರು ತಿಮ್ಮನಹಳ್ಳಿ ಗ್ರಾಮದಲ್ಲಿ ಅಮೃತ್ ಪೌಲ್ ಗೆ ಒಟ್ಟು 3.15 ಎಕರೆ ಜಮೀನು‌ ಕೊಡಿಸಿದ್ದೆ. ಅಂದಿನಿಂದ ಅಮೃತ್ ಪೌಲ್ ಸ್ನೇಹಿತರಾಗಿದ್ದರು. ಅದನ್ನು ಹೊರತುಪಡಿಸಿ ಯಾವುದೇ ವ್ಯವಹಾರಿಕ‌ ಸಂಬಂಧ ಇಟ್ಟುಕೊಂಡಿಲ್ಲ. ಸಿಐಡಿ ಅಧಿಕಾರಿಗಳು ತಮ್ಮ ಆಸ್ತಿಯ ಮೂಲ ದಾಖಲೆಗಳನ್ನು ಪರಿಶೀಲಿಸಿದರು. ಸಿಐಡಿ ತನಿಖೆಗೂ ಸಹಕಾರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದರು.

ಪಿಎಸ್ಐ ನೇಮಕಾತಿ ದೊಡ್ಡ ಹಗರಣವಾಗಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿರಲಿ ಶಿಕ್ಷೆ ಆಗಬೇಕು. ತಾಲೂಕಿನ ಜನಪ್ರತಿನಿಧಿಯೇ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಸ್ಥಳೀಯ ಶಾಸಕರ ಹೆಸರೇಳದೇ ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ಹಾಗೂ ಇಂಥ ದೊಡ್ಡ ಹಗರಣಗಳು ನಿಲ್ಲಬೇಕಾದರೆ ಮೊದಲು ಪ್ರಜೆಗಳು ಪ್ರಜ್ಞಾವಂತರಾಗಬೇಕು. ಆಗಷ್ಟೇ ಭ್ರಷ್ಟಾಚಾರಕ್ಕೆ ತಿಲಾಂಜಲಿ ಇಡಬಹುದು ಎಂದು ಅಭಿಪ್ರಾಯಪಟ್ಟರು. ಬೇನಾಮಿ ಆಸ್ತಿ‌ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ವರದಿ‌ ಮಾಡಿರುವ ಖಾಸಗಿ ವಾಹಿನಿಯವರು ಸತ್ಯಾಸತ್ಯತೆ ತಿಳಿದು ವರದಿ‌ ಮಾಡಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Edited By : Manjunath H D
PublicNext

PublicNext

07/08/2022 11:33 am

Cinque Terre

30.7 K

Cinque Terre

1

ಸಂಬಂಧಿತ ಸುದ್ದಿ