ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪಿಎಸ್‌ಐ ಅನ್ನು ಸಿಐಡಿ ಬಂಧಿಸಿದೆ.
ಶರೀಫ್ ಕಳ್ಳಿಮಠ ಬಂಧಿತ ಪಿಎಸ್‌ಐ. ಕಾಮಕ್ಷಿಪಾಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಶರೀಫ್ 2019ರ ಬ್ಯಾಚ್‌ನಲ್ಲಿ ಟಾಪರ್ ಆಗಿದ್ದರು. ಪಿಎಸ್‌ಐ ಅಕ್ರಮ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತಲೆ ಮರೆಸಿಕೊಂಡಿದ್ದರು.
ಮುಂಬೈನಲ್ಲಿ ಅಡಗಿದ್ದ ಶರೀಫ್‌ನನ್ನು ಬಂಧಿಸಿರುವ ಸಿಐಡಿ ತಂಡವು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದಿದುಕೊಂಡಿದೆ.
PublicNext
30/07/2022 07:10 pm