ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹತ್ತು ದಿನದ ಹಸುಗೂಸಿಗೆ ತಂದೆ ಬೇಕೆಂದು ಠಾಣೆ ಮೆಟ್ಟಿಲೇರಿದ‌ಅಸ್ಸಾಂ ಮಹಿಳೆ!

ಬೆಂಗಳೂರು: ಹತ್ತುದಿನಗಳ ಹಸುಗೂಸಿನ ತಂದೆಗಾಗಿ ಅಸ್ಸಾಂ ಮೂಲದ ಮಹಿಳೆ ಯಶವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಯಾಗಿ ಗಂಡು ಮಗುವಿಗೆ ತಂದೆಯಾದರೂ ಮಗು ತನ್ನದಲ್ಲ. ನಾನು ಮದುವೆನೇ ಆಗಿಲ್ಲ ಅಂತ ಹೇಳುತ್ತಿರುವ ಪತಿ ವಿರುದ್ಧ ಕಾನೂನು ಕ್ರಮಕ್ಕಾಗಿ ಮಹಿಳೆ‌ದೂರು ನೀಡಿದ್ದಾಳೆ.

ಅಸ್ಸಾಂ ಗುವಾಹಟಿ ಮೂಲದ ಬನೋರ್ಲಿ ಕಾಕೋಟಿ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ಮೂಲದ ಮೀರ್ ಹೈದರ್ ಆಲಿ ತಬರೇಜ್ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಯಾಚಾರ, ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಐದು ವರ್ಷಗಳ ಹಿಂದೆ ಸಂತ್ರಸೆ ದುಬೈನಲ್ಲಿ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ತೆರೆದಿದ್ದರು. ಇದೇ ಕಂಪೆನಿಯಲ್ಲಿ ತಬರೇಜ್ ಕೆಲಸಕ್ಕೆ ಸೇರಿಕೊಂಡಿದ್ದ. ಹೀಗೆ ಆರಂಭವಾದ ಪರಿಚಯ ಸಲುಗೆ ತಿರುಗಿತ್ತು. ಮೂರು ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿದ್ದ ಇವ್ರು ಬಳಿಕ ಇಬ್ಬರು ದುಬೈನಿಂದ ಭಾರತಕ್ಕೆ ಬಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ರು. 8 ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ಕೆಲಸ ನಿಮಿತ್ತ ಬೆಂಗಳೂರಿಗೆ ಹೊರಟ ಪತಿ ತಬರೇಜ್ ಮತ್ತೆ ವಾಪಸ್ ಬಂದಿರಲಿಲ್ಲ.

ನಂತರ ಪತಿಯನ್ನು ಭೇಟಿಯಾದಾಗ ನಿನ್ನ ಗರ್ಭದಾರಣೆ ನಾನು ಕಾರಣನಲ್ಲ. ಬೇಕಾದರೆ ಡಿಎನ್‌ಐ ಟೆಸ್ಟ್ ಮಾಡಿಸು ಎಂದು ತನ್ನಿಂದ‌ ದೂರವಾಗಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ತಬರೇಜ್ ನನ್ನು ಕರೆದು ಪ್ರಶ್ನಿಸಿದಾಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ.

ನಾನು ಹಾಗೂ ಒಂದೇ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದು ಇಬ್ಬರು ಸ್ನೇಹಿತರಾಗಿದ್ದೇವು.‌ ಆಕೆಯನ್ನು ನಾನು ಮದುವೆಯಾಗಿಲ್ಲ. ಮಗುವಿಗೆ ನಾನು ತಂದೆಯಲ್ಲ.ಬೇಕಾದರೆ ನಾನು ಡಿಎನ್ಎ ಟೆಸ್ಟ್ ಗೆ ಒಳಗಾಗಲು ಸಿದ್ದನಿದ್ದೇನೆ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಪ್ರಕರಣವನ್ನ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Edited By : Manjunath H D
PublicNext

PublicNext

30/07/2022 11:44 am

Cinque Terre

31.63 K

Cinque Terre

2

ಸಂಬಂಧಿತ ಸುದ್ದಿ