ಹೊಸಕೋಟೆ: ಕಾಲೇಜು ಮುಗಿಸಿ ಬೈಕ್‌ನಲ್ಲಿ ವಿದ್ಯಾರ್ಥಿನಿ ಮನೆಗೆ ವಾಪಸ್ ಆಗುತ್ತಿದ್ದಳು. ಈ ವೇಳೆ ಹೊಸಕೋಟೆ ಕೋಲಾರ ರಾಷ್ಟ್ರೀಯ ಹೆದ್ದಾರಿ 4ರ ಕೊರಳೂರು ಗೇಟ್ ಬಳಿ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೊರಳೂರಿನ ವಿದ್ಯಾರ್ಥಿನಿ ಚೈತನ್ಯ (21) ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಚಾಲಕ ಸ್ಥಳದಲ್ಲೆ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಕೊರಳೂರು ಸುತ್ತಮುತ್ತಲ ಐದಾರು ಜನರ ಸಾವು ನೋವಿಗೆ ಕಾರಣವಾದ ಹೆದ್ದಾರಿ ಪ್ರಾದಿಕಾರದ ವಿರುದ್ಧ, ಗ್ರಾಮಸ್ಥರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ತಮ್ಮ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ. ಮತ್ತೊಂದೆಡೆ ರೆಡಿಮಿಕ್ಸ್ ಲಾರಿ ಡಿಕ್ಕಿಯಾಗಿ ಮೃತಪಟ್ಟ ಚೈತನ್ಯ. ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ-ಕೋಲಾರ ರಾಷ್ಟ್ರೀಯ ಹೆದ್ದಾರಿ 4ರ ಕೊಳತೂರು ಗೇಟ್ ಬಳಿ. ರೆಡಿಮಿಕ್ಸ್ ತುಂಬಿಕೊಂಡು ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದು, ಹತ್ತಾರು ಮೀಟರ್ ಎಳೆದೊಯ್ದಿದೆ. ಇದರಿಂದ ಚೈತನ್ಯ ಸ್ಥಳದಲ್ಲೆ ಸಾವನಪ್ಪಿದ್ದಾಳೆ. ಸರ್ವೀಸ್ ರಸ್ತೆ ಬಂದ್ ಮತ್ತು ಲಾರಿ ಚಾಲಕ ಅತಿವೇಗ, ರಸ್ತೆ ದಾಟಲು ಪರ್ಯಾಯ ಮಾರ್ಗ ಇಲ್ಲದ ಕಾರಣ ಕೊರಳೂರು ಗೇಟ್‌ನಲ್ಲಿ ಮೂರ್ನಾಲ್ಕು ವರ್ಷಗಳಲ್ಲಿ ಐದಾರು ಜನ ಸಾವನ್ನಪ್ಪಿದ್ದಾರೆ. ಹೀಗೆ ಹೇಳುತ್ತಾ ಪೋಷಕರು ಕಣ್ಣೀರು ಹಾಕಿದ್ದಾರೆ.
ನಮಗೆ ನ್ಯಾಯ ಕೊಡಿ, ಸರ್ವೀಸ್ ರಸ್ತೆಯ ಸಮಸ್ಯೆ ಬಗೆಹರಿಸಿ ಎಂದು ಪೋಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೊಸಕೋಟೆ ಡಿವೈಎಸ್‌ಪಿ ಉಮಾಶಂಕರ್ ಮತ್ತು ಇನ್‌ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಬಂದು ಕಾನೂನು ಕ್ರಮದ ಭರವಸೆ ನೀಡಿದರು. ಸರ್ವೀಸ್ ರಸ್ತೆಯ ವ್ಯವಸ್ಥೆಗಾಗಿ ಇನ್ನಷ್ಟು ಜೀವ ಬಲಿಯಾಗಬೇಕು. ಹೆದ್ದಾರಿ ಪ್ರಾಧಿಕಾರ ಇತ್ತ ಗಮನ ಹರಿಸಿ ಜನರ ಜೀವರಕ್ಷಿಸಲಿ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ.
PublicNext
26/07/2022 10:12 pm