ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೇಮಂತ್ ಮರ್ಡರ್‌ ಕೇಸ್; A1 ಹರೀಶ್ ಸಹಿತ ನಾಲ್ವರು ಬಾಲಾಪರಾಧಿಗಳ ಸೆರೆ

ಬೆಂಗಳೂರು: ಅಂಡರ್ ವರ್ಲ್ಡ್ ನಲ್ಲಿ ಎದುರಾಳಿ ಮಾತ್ರ ಟಾರ್ಗೆಟ್. ಹೊಡೆದಾಡ್ತಾರೆ, ಬಡಿದಾಡ್ತಾರೆ. ಸಂಬಂಧ ಇಲ್ಲದ ಅಮಾಯಕರನ್ನು ಟಚ್ ಮಾಡಲ್ಲ ಅನ್ನೋ ಮಾತಿದೆ. ಆದ್ರೆ, ಮೊನ್ನೆ ನಡೆದ ಯುವಕ ಹೇಮಂತ್ ಹತ್ಯೆ ಹಿಂದೆ ಅಂಡರ್ ವರ್ಲ್ಡ್ ಕರಿನೆರಳು ಇದ್ದು, ತಮ್ಮ ಬಾಸ್ ಗೊತ್ತಿಲ್ಲ ಅಂದಿದ್ದಕ್ಕೆ ಅಮಾಯಕ ಹೇಮಂತ್ ಬಲಿಯಾಗಿದ್ದ!

ಜುಲೈ 16ರಂದು ಕೆಂಗೇರಿ ಹೆಮ್ನಿಗೆಪುರದ ಬಳಿ ಹೇಮಂತ್ ಭೀಕರವಾಗಿ ಹತ್ಯೆಗೈಯಾಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಈ ಅಮಾನುಷ ಹತ್ಯೆ ವೈಖರಿ ಕಂಡ ಪೊಲೀಸ್ರೂ ಹಂತಕರಿಗೆ ಅದ್ಯಾವ ಪರಿ ಕೋಪ ಇರಬಹುದೆಂದು ಯೋಚಿಸಿದ್ರು.‌ ಬಳಿಕ ಹಂತಕರ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಮುಂದುವರೆಸಿದ್ರು.

ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಇಂದು ಪ್ರೆಸ್ ಮೀಟ್ ನಡೆಸಿ‌ ಕೇಸ್ ಬಗ್ಗೆ ಸಂಪೂರ್ಣ ‌ಮಾಹಿತಿ ನೀಡಿದ್ದಾರೆ. ಹೇಮಂತ್ ಬರ್ತ್‌ ಡೇ ದಿನ ಪ್ಲಾನ್ ಮಾಡಿ ಹತ್ಯೆ ಮಾಡಲಾಗಿದೆ. ಚಾಮರಾಜಪೇಟೆಯಲ್ಲಿ ಹೇಮಂತ್ ಸ್ನೇಹಿತರು ಕುಡಿದು ಡಾನ್ ಬಗ್ಗೆ ಮಾತನಾಡಿ ಅಲ್ಲಿಂದ ಹೊರಡುತ್ತಾರೆ. ಸ್ನೇಹಿತರು ಜೆ.ಎಸ್.ಎಸ್‌. ಕಾಲೇಜಿನವರೆಗೂ ಬಿಟ್ಟು ಹೋಗುತ್ತಾರೆ.

ಆ ವೇಳೆ ಹಿಂಬಾಲಿಸಿ ಬಂದ ಹಂತಕರು ಡ್ರಾಪ್ ಕೊಡುವ ನೆಪದಲ್ಲಿ ಹೇಮಂತ್ ನನ್ನು ಎರಡು ಬೈಕ್ ಗಳಲ್ಲಿ‌‌‌‌ ಪಿಕಪ್ ಮಾಡುತ್ತಾರೆ. ಬಳಿಕ ಪ್ಲಾನ್ ನಂತೆ ಮಾರ್ಗ ಮಧ್ಯೆ ಕಿರಿಕ್ ತೆಗೆಯುತ್ತಾರೆ. ಆ ಜಗಳದಲ್ಲೂ ಹೇಮಂತ್ ಕುಳ್ಳ ರಿಜ್ವಾನ್ ಬಗ್ಗೆ ನಿಂದಿಸುತ್ತಾನೆ. ನಾನೇ ಡಾನ್ ಅಂತ ಹಂತಕ ( A1 ) ಹರೀಶ್ ಬಳಿ ಬಡಾಯಿ ಕೊಚ್ಚಿಕೊಳ್ಳುತ್ತಾನೆ.

ಆ ಕೋಪದಿಂದ ಹತ್ಯೆಗೆ ಪ್ಲಾನ್ ಮಾಡಿದ್ದ ಹಂತಕರು ಕೊಲೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಕುಳ್ಳ ರಿಜ್ವಾನ್ ಗೆ ರವಾನಿಸುತ್ತಾರೆ. ಸದ್ಯ, ಹರೀಶ್ ಸೇರಿ ನಾಲ್ವರು ಬಾಲಾಪರಾಧಿಗಳನ್ನ ವಶಕ್ಕೆ ಪಡೆದು ಕೆಂಗೇರಿ ಪೊಲೀಸ್ರು ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದಾರೆ.

ವರದಿ: ರಂಜಿತಾ ಸುನಿಲ್ ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Somashekar
PublicNext

PublicNext

26/07/2022 11:41 am

Cinque Terre

27.52 K

Cinque Terre

0

ಸಂಬಂಧಿತ ಸುದ್ದಿ