ಬೆಂಗಳೂರು: ಬೆಂಗಳೂರು ಪೊಲೀಸ್ರು ಸೈಬರ್ ಕ್ರೈಂ ಡಿಟೆಕ್ಷನ್ ನಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ಕಾನ್ಸ್ಟೇಬಲ್‌ನ ಚಾಕಚಕ್ಯತೆಯಿಂದ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಅವರ ಬ್ಯಾಂಕಿನಿಂದ ಸೈಬರ್ ಖದೀಮರು ಎಗರಿಸಿದ್ದ 9 ಲಕ್ಷ ರೂಪಾಯಿಯನ್ನ ಒಂದೇ ಗಂಟೆಯಲ್ಲಿ ಮರಳಿ ಅಕೌಂಟ್ ಗೆ ಜಮೆ ಮಾಡಿಸಿದ್ದಾರೆ.
ಕೆವೈಸಿ ಅಪ್ ಡೇಟ್ ಮಾಡುವುದಾಗಿ ಬ್ಯಾಂಕ್ ಹೆಸರು ಹೇಳಿಳಕೊಂಡು ನಿವೃತ್ತ ಲೋಕಾಯುಕ್ತ ರಿಜಿಸ್ಟ್ರಾರ್ ರೊಬ್ಬರಿಗೆ ಕರೆ ಮಾಡಿದ ಆನ್ ಲೈನ್ ವಂಚಕರು ಎಲ್ಲಾ ದಾಖಲಾತಿಗಳನ್ನ ಪೋನ್ ನಲ್ಲಿ ಪಡೆದುಕೊಂಡು, ಕ್ಷಣಾರ್ಧದಲ್ಲಿ ಜೀವಮಾನವಿಡಿ ಸಂಪಾದಿಸಿದ್ದ 9 ಲಕ್ಷ ಪಿಂಚಣಿ ಹಣ ಎಗರಿಸಿದ್ದರು. ಹಣ ಕಳೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ದೂರುದಾರರು ಕೂಡಲೇ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಈ ವೇಳೆ ರಜೆಯಿದ್ದರೂ ಅನ್ಯ ಕಾರ್ಯನಿಮಿತ್ತ ಠಾಣೆಗೆ ಬಂದಿದ್ದ ಕಾನ್ಸ್ಟೇಬಲ್ ಆಶ್ತಪ್ ಸಬ್ ಪಿಂಜಾರ, ದೂರು ದಾಖಲಿಸಿಕೊಳ್ಳದೆ ಕೂಡಲೇ ಕೆನೆರಾ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರಾಜಸ್ತಾನದಲ್ಲಿದ್ದ ಮ್ಯಾನೇಜರ್ ಕೂಡಲೇ ಕಾರ್ಯಪ್ರವೃತ್ತರಾಗಿ ಸೈಬರ್ ಖದೀಮರ ಬ್ಯಾಂಕ್ ಅಕೌಂಟ್ ಖಾತೆಯನ್ನ ಫ್ರೀಜ್ ಮಾಡಿದ್ದಾರೆ. ಅಕೌಂಟ್ ನಲ್ಲಿದ್ದ 9 ಲಕ್ಷ ಹಣವನ್ನ ದೂರುದಾರರಿಗೆ ವಾಪಸ್ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸ್ವಲ್ಪ ಯಮಾರಿದ್ರು ಲಕ್ಷ ಲಕ್ಷ ಹಣ ಸೈಬರ್ ಖದೀಮರು ಪಾಲಾಗುತಿತ್ತು. ಫ್ರೀಜ್ ಆದ ಹಣ ತನ್ನ ಖಾತೆಗೆ ರಿಟರ್ನ್ ಆದ ಹಿನ್ನೆಲೆ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಗೆ ದೂರುದಾರರು ಧನ್ಯವಾದ ಹೇಳಿದ್ದಾರೆ. ಸಿಬ್ಬಂದಿ ತೋರಿದ ಸಮಯಪ್ರಜ್ಞೆಗೆ ಡಿಸಿಪಿ ಸಿ.ಕೆ.ಬಾಬಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಯಾವ ಬ್ಯಾಂಕ್ ನವರು ಸಹ ಕರೆ ಮಾಡಿ ದಾಖಲೆ ಕೇಳುವುದಿಲ್ಲ. ಹಿರಿಯ ನಿವೃತ್ತ ಹೊಂದಿದ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ ವಂಚನೆ ಹೆಚ್ಚಾಗುತ್ತಿದೆ.ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಡಿಸಿಪಿ ಮನವಿ ಮಾಡಿದ್ದಾರೆ.
PublicNext
20/07/2022 08:51 pm