ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಜಲಮಂಡಳಿಯಲ್ಲಿ ಕೆಲಸ ಕೊಡಿಸೋದಾಗಿ 1.53 ಕೋಟಿ ರೂ. ಪಡೆದು ವಂಚನೆ; ಇಬ್ಬರ ಬಂಧನ

ಬೆಂಗಳೂರು: ಜಲಮಂಡಳಿಯಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ 1.5 ಕೋಟಿ ರೂ. ಪಡೆದು ವಂಚಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್‌ನ ಪ್ರಕಾಶ್ ಮತ್ತು ಹೊಸಕೋಟೆಯ ನಾರಾಯಣಪ್ಪ ಬಂಧಿತ ಆರೋಪಿಗಳು. ಈ ಇಬ್ಬರು ಗುತ್ತಿಗೆದಾರ ಮುನಿರಾಜು ಎಂಬಾತನ ಕುಟುಂಬದ 8 ಜನರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 1.53 ಕೋಟಿ ರೂ. ಪಡೆದಿದ್ದರು. ಕೊಟ್ಟ ಹಣವೂ ಇಲ್ಲ ಇತ್ತ ಕೆಲಸವೂ ಇಲ್ಲ ಎಂಬುದು ಗೊತ್ತಾಗಿ ಮುನಿರಾಜು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣ ಮತ್ತೋರ್ವ ಆರೋಪಿ ವಿಧಾನಸೌಧದಲ್ಲಿ ಉದ್ಯೋಗದಲ್ಲಿರುವ ಪಾಟೀಲ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಪರಾರಿಯಾದ ಆರೋಪಿಗೆ ಚಿಕ್ಕಜಾಲ ಪೊಲೀಸರು ಬಲೆ ಬೀಸಿದ್ದಾರೆ. ಈ ವಂಚಕ ಗುತ್ತಿಗೆದಾರರು ಹಣ ಮಾಡುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ, ತಮಗೆ ಯಾವ ರಾಜಕಾರಣಿ, ಅಧಿಕಾರಿಗಳಾಗಲಿ, ಪೊಲೀಸರಾಗಲಿ ಗೊತ್ತಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ವರದಿ: ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ

Edited By :
PublicNext

PublicNext

03/07/2022 11:48 am

Cinque Terre

54.37 K

Cinque Terre

0

ಸಂಬಂಧಿತ ಸುದ್ದಿ